ಮೆಹುಲ್ ಚೋಕ್ಸಿ ಭಾರತೀಯ ಪ್ರಜೆಯೇ ಅಲ್ಲ, ಭಾರತಕ್ಕೆ ಗಡೀಪಾರು ಮಾಡುವಂತಿಲ್ಲ : ವಕೀಲರ ವಾದ

Prasthutha|

ನವದೆಹಲಿ : ಪಿಎನ್‌ ಬಿ ಹಗರಣದ ಆರೋಪಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯ ನಡುವೆಯೇ, ಆತ ಭಾರತದ ಪ್ರಜೆಯೇ ಅಲ್ಲ ಎಂದು ಆತನ ವಕೀಲರು ವಾದಿಸಿದ್ದಾರೆ. ಚೋಕ್ಸಿಯನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಕೋರಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಭಾರತ ಸರಕಾರ ಸಲ್ಲಿಸಿದೆ. ಅಲ್ಲದೆ, ವಿಶೇಷ ವಿಮಾನವನ್ನು ಡೊಮಿನಿಕಾಗೆ ಕಳುಹಿಸಿಕೊಟ್ಟಿದೆ.

- Advertisement -

ಆದರೆ, ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಆತ ಭಾರತದ ಪ್ರಜೆಯೇ ಅಲ್ಲ ಎಂಬ ವಾದವನ್ನು ಆತನ ವಕೀಲರು ಮಂಡಿಸಿದ್ದಾರೆ. ಡೊಮಿನಿಕಾ ಅಧಿಕಾರಿಗಳು ಆರೋಪಿಯ ಗಡಿಪಾರಿಗೆ ಸಹಕರಿಸುತ್ತಿದ್ದರೂ, ನ್ಯಾಯಾಲಯಗಳ ತೀರ್ಪಿನ ಮೇಲೆ ಗಡೀಪಾರು ಭವಿಷ್ಯ ನಿರ್ಧಾರವಾಗಲಿದೆ.

ಉಭಯ ದೇಶಗಳಲ್ಲಿ ಚೋಕ್ಸಿ ದುಬಾರಿ ವಕೀಲರ ನೆರವಿನೊಂದಿಗೆ ತಮ್ಮ ವಾದ ಮಂಡಿಸಿದ್ದಾರೆ. ಇದಕ್ಕೆ ಆಂಟಿಗುವಾ ಮತ್ತು ಬಾರ್ಬಡಾ ದೇಶಗಳ ವಿರೋಧ ಪಕ್ಷಗಳ ಸಹಕಾರವೂ ಇದೆ. ಚೋಕ್ಸಿ ಆಂಟಿಗುವಾ ಪೌರತ್ವ ಪಡೆದ ತಕ್ಷಣವೇ ಅವರ ಭಾರತೀಯ ಪೌರತ್ವ ರದ್ದಾಗಿದೆ. ಆದ್ಧರಿಂದ ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತಿಲ್ಲ ಎಂಬ ವಾದವನ್ನು ಚೋಕ್ಸಿ ಪರ ವಕೀಲರು ಮುಂದಿಟ್ಟಿದ್ದಾರೆ. ಬುಧವಾರ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.



Join Whatsapp