ಭಾರತೀಯ ವಿದ್ಯಾರ್ಥಿನಿಗೆ ಯುಎಇ ಗೋಲ್ಡನ್‌ ವೀಸಾ!

Prasthutha|

ದುಬೈ : ಸಾಮಾನ್ಯವಾಗಿ ಪ್ರಮುಖ ಜಾಗತಿಕ ವ್ಯಕ್ತಿತ್ವ ಅಥವಾ ಶ್ರೀಮಂತ ಹೂಡಿಕೆದಾರರಿಗೆ ಮಾತ್ರ ಲಭಿಸುತ್ತಿದ್ದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನ ಬಹು ಅಪೇಕ್ಷಿತ ಗೋಲ್ಡನ್‌ ವೀಸಾ ಭಾರತದ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬರಿಗೆ ಸಿಕ್ಕಿದೆ. ಕೇರಳದ ತಸ್ನೀಮ್‌ ಎಂಬ ವಿದ್ಯಾರ್ಥಿನಿಗೆ ಅವಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಈ ವೀಸಾವನ್ನು ಪ್ರದಾನಿಸಲಾಗಿದೆ.

- Advertisement -

ʼಅಸಾಧಾರಣ ವಿದ್ಯಾರ್ಥಿʼ ಎಂಬ ವಿಭಾಗದಲ್ಲಿ ಅವರಿಗೆ 10 ವರ್ಷಗಳ ಗೋಲ್ಡನ್‌ ವೀಸಾ ದೊರಕಿದೆ. ಹೀಗಾಗಿ 2031ರ ವರೆಗೂ ತಸ್ನೀಮ್‌ ಗೆ ಯಾವುದೇ ಪ್ರಾಯೋಕತ್ವವಿಲ್ಲದೆ ದುಬೈನಲ್ಲಿ ನೆಲೆಸಬಹುದಾಗಿದೆ.

ಶಾರ್ಜಾದ ಅಲ್‌ ಖಾಸಿಮಿಯ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್‌ ಶರಿಯ ಅಧ್ಯಯನ ಮಾಡಿರುವ ತಸ್ನೀಮ್‌, ಪ್ರಥಮ ಸ್ಥಾನ ಪಡೆದಿದ್ದಾಳೆ. 72 ದೇಶಗಳ ಅನೇಕ ವಿದ್ಯಾರ್ಥಿಗಳಿದ್ದ ತನ್ನ ತರಗತಿಯಲ್ಲಿ ತಸ್ನೀಮ್‌ ಮೊದಲನೇ ಸ್ಥಾನ ಗಳಿಸಿದ್ದಾಳೆ. ಆಕೆಯ ಗ್ರೇಡ್‌ ಪಾಯಿಂಟ್‌ ಸರಾಸರಿ 4ಕ್ಕೆ 3.94 ಇತ್ತು ಎಂದು ವರದಿಯೊಂದು ತಿಳಿಸಿದೆ.

- Advertisement -

5 ಅಥವಾ 10 ವರ್ಷಗಳ ಗೋಲ್ಡನ್‌ ವೀಸಾ ತನ್ನಿಂತಾನೇ ನವೀಕರಿಸಲ್ಪಡುತ್ತದೆ. ವಿದೇಶಿಯರು ಪ್ರಾಯೋಜಕತ್ವವಿಲ್ಲದೆ ಯುಎಇಯಲ್ಲಿ ನೆಲೆಸಲು, ಕೆಲಸ ಮಾಡಲು ಮತ್ತು ಅಧ್ಯಯನ ಕೈಗೊಳ್ಳಲು ಈ ವೀಸಾ ನೀಡಲಾಗುತ್ತದೆ. ೨೦೧೯ರಂದ ಯುಎಇ ಸರಕಾರ ಈ ವೀಸಾ ಪರಿಚಯಿಸಿದೆ.



Join Whatsapp