ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಒಂದೇ ಕುಟುಂಬದ ಮೂವರು ಬಲಿ; ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಆತಂಕ!

Prasthutha|

ದಕ್ಷಿಣ ಕನ್ನಡ : ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಒಂದೇ ಕುಟುಂಬದ ಮೂರು ಮಂದಿ ಸದಸ್ಯರು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಕೇವಲ 15 ದಿನಗಳ ಅಂತರದಲ್ಲಿ ಬಲಿಯಾಗಿದ್ದಾರೆ.

- Advertisement -

ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ಪುರಲ್ಲ(92), ಅವರ ಪುತ್ರಿ ಅಪ್ಪಿ(45) ಹಾಗೂ ಅಪ್ಪಿಯವರ ಪತಿ ಗುರುವ(52) ಎಂಬವರನ್ನು ಕೊರೊನಾ ಬಲಿ ಪಡೆದುಕೊಂಡಿದೆ.

ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ರವರ ತಂದೆ ಪುರಲ್ಲ ರವರು ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲಿ ಮೇ.13 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದಾದ ನಂತರ ಮೃತರ ಪುತ್ರಿ ಅಪ್ಪಿ ರವರು ಮೇ .23 ರಂದು ಮೃತಪಟ್ಟಿದ್ದು, ಮೃತರ ಅಳಿಯ ಗುರುವ (52)ರವರು ಮೇ.27 ರಂದು ಸೋಂಕಿಗೆ ಬಲಿಯಾಗಿದ್ದಾರೆ. ಮಾರಣಾಂತಿಕ ಕೊರೊನಾದಿಂದ ಒಂದೇ ತಿಂಗಳಲ್ಲಿ ಮನೆಯ ಮೂರೂ ಸದಸ್ಯರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

- Advertisement -

ಉಜಿರೆ ಗ್ರಾಮದ ಗಾಂಧಿನಗರ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಈಗಾಗಲೇ ಹಲವರಿಗೆ ಸೋಂಕು ಧೃಢಪಟ್ಟಿದೆ. ಇದೀಗ ಒಂದೇ ಕುಟುಂಬದ ಮೂರು ಸದಸ್ಯರ ಸಾವಿನಿಂದ ಸ್ಥಳೀಯ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಇನ್ನಾದರೂ ತಾಲೂಕು ಆಡಳಿತ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ  ಹೆಚ್ಚಿನ ಗಮನ ಹರಿಸಿ ಕಟ್ಟುನಿಟ್ಟಾಗಿ ಕೋವಿಡ್ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Join Whatsapp