ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ ಕೋಟ್ಯಂತರ ರೂಪಾಯಿಗಳ ವಂಚನೆ ಎಸಗಿ ತಲೆಮರೆಸಿಕೊಂಡಿದ್ದ ಉದ್ಯಮಿ ಮೆಹುಲ್ ಚೋಕ್ಸಿ ಕ್ಯುಬಾಗೆ ಅಲಾಯನ ಮಾಡುವಾಗ ದೊಮಿನಿಕಾದಲ್ಲಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿದೆ. ಚೋಕ್ಸಿ ಭಾರತದಲ್ಲಿ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ.
ಭಾರತದಿಂದ ಪರಾರಿಯಾದ ನಂತರ ಮೆಹುಲ್ ಚೋಕ್ಸಿ ಕೆರಿಬಿಯನ್ ದ್ವೀಪ ರಾಷ್ಟ್ರ ಆಂಟಿಗುವಾ ಹಾಗೂ ಬಾರ್ಬುಡಾದಲ್ಲಿ ಇರುತ್ತಿದ್ದ ಎನ್ನಲಾಗಿದೆ. ಈ ವಾರಾರಂಭದಿಂದ ಅಲ್ಲಿಂದಲೂ ಪಲಾಯನ ಮಾಡಿದ್ದ.2018 ರಿಂದ ಚೋಕ್ಸಿ ಈ ದ್ವೀಪ ರಾಷ್ಟ್ರದಲ್ಲಿ ವಾಸಿಸುತ್ತಿದ್ದ. 62 ವರ್ಷ ವಯಸ್ಸಿನ ಚೋಕ್ಸಿ ದ್ವೀಪ ರಾಷ್ಟ್ರದಿಂದ ಬೋಟ್ ಮೂಲಕ ಡೊಮಿನಿಕಾ ತಲುಪಿದ್ದ ಎನ್ನಲಾಗಿದೆ.
ಚೋಕ್ಸಿ ವಿರುದ್ಧ ಇಂಟರ್ ಪೋಲ್ ಲುಕ್ ಔಟ್ ನೋಟೀಸು ಹೊರಡಿಸಿದ್ದರಿಂದಾಗಿ ಆತನನ್ನು ಡೊಮಿನಿಕಾ ಪೊಲೀಸರು ಸೆರೆ ಹಿಡಿದಿದ್ದಾರೆ. ಆಂಟಿಗುವಾ ಅಧಿಕಾರಿಗಳಿಗೆ ಆತನನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿದೆ