ನವದೆಹಲಿ : ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಯಂತ್ರಿಸುವ ಹೊಸ ಮಾರ್ಗಸೂಚಿಗೆ ಬದ್ಧವಾಗಿರುವುದನ್ನು ಘೋಷಿಸಲು ನಿನ್ನೆ ಕೊನೆಯ ದಿನವಾಗಿದ್ದು, ಈ ನಡುವೆ ವಿಷಯಕ್ಕೆ ಸಂಬಂಧಿಸಿ ವಾಟ್ಸಪ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ಹೊಸ ನೀತಿಗಳು ಅಸಂವಿಧಾನಿಕವಾದುದು ಎಂದು ವಾಟ್ಸಪ್ ಕೋರ್ಟ್ ಗೆ ತಿಳಿಸಿದೆ. ಹೊಸ ಮಾರ್ಗಸೂಚಿಯಲ್ಲಿ ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವ ನಿಯಮಗಳಿವೆ ಎಂದು ಅಭಿಪ್ರಾಯ ಪಟ್ಟಿರುವ ಕೋರ್ಟ್, ಇದು ಅಸಂವಿಧಾನಿಕ ಎಂದಿದೆ.
ತನ್ನ ವಾದವನ್ನು ಸಮರ್ಥಿಸಲು ಅದು ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಉಲ್ಲೇಖಿಸಿದೆ. ಮೂಲ ಸಂದೇಶ ಯಾರು ಕಳುಹಿಸಿದ್ದು ಎಂಬುದನ್ನು ಪತ್ತೆ ಹಚ್ಚುವುದು ಅಸಂವಿಧಾನಿಕ ಮತ್ತು ಈ ಮಾರ್ಗಸೂಚಿಯನ್ನು ತಡೆಯುವಂತೆ ಫೇಸ್ ಬುಕ್ ಒಡೆತನದ ವಾಟ್ಸಪ್ ಹೈಕೋರ್ಟ್ ಗೆ ಕೋರಿದೆ.