ಮಂಗಳೂರು: ಗಲ್ಫ್ ರಾಷ್ಟ್ರದಿಂದ ಮತ್ತೆ ಭಾರತಕ್ಕೆ ಕೋವಿಡ್ ನೆರವಿನ ಹಸ್ತ

Prasthutha|

ಮಂಗಳೂರು: ಗಲ್ಫ್ ರಾಷ್ಟ್ರ ಕುವೈಟ್ ಮತ್ತೆ ಭಾರತಕ್ಕೆ ಕೋವಿಡ್ ನೆರವಿನ ಹಸ್ತ ಒದಗಿಸಿದೆ. ಇಂದು ಬೆಳಿಗ್ಗೆ ಕುವೈಟ್ ರಾಷ್ಟ್ರದಿಂದ ಆಕ್ಸಿಜನ್ ಸಹಿತ ವೈದ್ಯಕೀಯ ಪರಿಕರಗಳನ್ನ ಹೊತ್ತು ತಂದ ಐಎನ್ಎಸ್ ಶಾರ್ದೂಲ್ ಎನ್ಎಂಪಿಟಿ ಗೆ ಬಂದಿಳಿಯಿತು. ಕೋವಿಡ್ ಸಂದಿಗ್ಧತೆ ಸ್ಥಿತಿಯಲ್ಲಿರುವ ಭಾರತಕ್ಕೆ ಇಂಡಿಯನ್ ಕಮ್ಯುನಿಟಿ ಸಪೋರ್ಟ್ ಕುವೈಟ್ ಇದರ ಮೂಲಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಕುವೈಟ್ ರಾಷ್ಟ್ರವು ನೆರವಿನ ಹಸ್ತವನ್ನ ಹಸ್ತಾಂತರಿಸಿದೆ.

- Advertisement -

ಪ್ರಸ್ತುತ ಆಗಮಿಸಿದ ನೌಕೆಯಲ್ಲಿ 11 ಲಿಕ್ವಿಡ್ ಟ್ಯಾಂಕರ್ ಗಳು, ದ್ರವ ಆಕ್ಸಿಜನ್ ಸಹಿತ 2 ಸೆಮಿ ಟ್ರೇಲರ್ ಗಳು ಹಾಗೂ 1200 ಆಕ್ಸಿಜನ್ ಸಿಲಿಂಡರ್ ಗಳು ಇದ್ದು ಇದನ್ನ ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಾಂತರಾಮ್ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ್ ಶರ್ಮಾ, ರಾಜ್ಯ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ ಎನ್ಎಂಪಿಟಿಯಲ್ಲಿ ಸ್ವೀಕರಿಸಿದರು.

ಈ ಸಂದರ್ಭ ಎಡಿಜಿಪಿ ಪ್ರತಾಪ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಸಿಪಿ ಮಹೇಶ್ ಕುಮಾರ್ ಹಾಗೂ ಕೋಸ್ಟ್ ಗಾರ್ಡ್ ನ ವೆಂಕಟೇಶ್ ಉಪಸ್ಥಿತರಿದ್ದರು.  



Join Whatsapp