ಇಂದಿನಿಂದ ಕೋವಿಡ್ ಲಸಿಕೆ ಅಲಭ್ಯತೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕಾ ಶಿಬಿರ ತಾತ್ಕಾಲಿಕ ಸ್ಥಗಿತ

Prasthutha|

ಮಂಗಳೂರು: ಕೊರೊನಾ ಸೋಂಕಿಗೆ ನೀಡಲಾಗುವ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭ್ಯತೆ ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಲಸಿಕಾ ಶಿಬಿರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಇಂದಿನಿಂದ ಜಿಲ್ಲೆಯಲ್ಲಿ ಯಾವುದೇ ಲಸಿಕಾ ಶಿಬಿರಗಳು ಇರುವುದಿಲ್ಲ ಎನ್ನುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

- Advertisement -

ಸರಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್ ಸೇರಿದಂತೆ ತಾಲೂಕು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೇ 25 ರಿಂದ ಲಸಿಕೆ ಲಭ್ಯತೆಯು ಇಲ್ಲದಿರುವ ಕಾರಣ ಯಾವುದೇ ಲಸಿಕಾ ಶಿಬಿರವು ಇರುವುದಿಲ್ಲ. ಮುಂದಿನ ಲಸಿಕಾ ಶಿಬಿರವನ್ನು ಲಸಿಕೆಯ ಲಭ್ಯತೆಯ ನಂತರ ಮಾಹಿತಿ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.



Join Whatsapp