ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಶಾಂತಿ ಪ್ರಯತ್ನಗಳಿಗೆ ಅನುಕೂಲವಾಗುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಸಿದ್ಧವಾಗಿದೆ ಎಂದು ಅಬುಧಾಬಿಯ ರಾಜಕುಮಾರ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಉಲ್ಲೇಖಿಸಿ ಯುಎಇ ರಾಜ್ಯ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ.
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ದೂರವಾಣಿ ಕರೆಯ ಮೂಲಕ ಶೇಖ್ ಮುಹಮ್ಮದ್ ತಮ್ಮ ಅಭಿಮತವನ್ನು ಮುಂದಿಟ್ಟಿದ್ದು, 11 ದಿನಗಳ ಹೋರಾಟದ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರು ಒಪ್ಪಿದ ಕದನ ವಿರಾಮವನ್ನು ಹೆಚ್ಚಿಸುವ ಈಜಿಪ್ಟ್ ಪ್ರಯತ್ನಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಕಳೆದ ವರ್ಷ ಇಸ್ರೇಲ್ನೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ ಯುಎಇ, “ಕದನ ವಿರಾಮವನ್ನು ಕಾಪಾಡಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಮತ್ತು ಅಶಾಂತಿ ವಾತಾವರಣದ ಉಲ್ಬಣವನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಸಾಧಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಿದ್ಧವಾಗಿದೆ” ಎಂದು ಶೇಖ್ ಮೊಹಮ್ಮದ್ ಹೇಳಿದ್ದಾಗಿ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.