ಎಂ ಆರ್ ಪಿ ಎಲ್ ನೇಮಕಾತಿ ವಿವಾದ : ಸ್ಥಳೀಯರಿಗೆ ಉದ್ಯೋಗ ನೀಡಲು ಎಸ್‌ ಡಿಪಿಐ ಆಗ್ರಹ

Prasthutha|

ಮಂಗಳೂರು : ಇಲ್ಲಿನ ONGC  ಒಡೆತನದ MRPL ಸಂಸ್ಥೆಯಲ್ಲಿ ಇತ್ತೀಚೆಗೆ 184 ಹುದ್ದೆಗಳ ಹೊಸ  ನೇಮಕಾತಿಯಲ್ಲಿ 172 ಹುದ್ದೆಗಳನ್ನು ಹೊರ ರಾಜ್ಯಗಳ ಅಭ್ಯರ್ಥಿಗಳಿಗೆ ನೀಡುವ ಮೂಲಕ ಸಂಸ್ಥೆ ಹಾಗೂ ಸರಕಾರ ಕನ್ನಡಿಗರಿಗೆ ಅವಮಾನ ಹಾಗೂ ಘೋರ ಅನ್ಯಾಯ ಮಾಡಿದೆ ಎಂದು ಎಸ್‌ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿದ್ದಾರೆ. ಈ ಸಂಬಂಧ ಅವರು ಪತ್ರಿಕಾ ಪ್ರಕಟನೆಯನ್ನು ಬಿಡುಗಡೆಗೊಳಿಸಿದ್ದಾರೆ.

- Advertisement -

ಮಂಗಳೂರಿನಲ್ಲಿ MRPL ಆರಂಭವಾದ ಹಾಗೂ ವಿಸ್ತರಣೆಗೊಂಡ ಸಂದರ್ಭದಲ್ಲಿ ಸ್ಥಳೀಯರ ವಿರೋಧದ ನಡುವೆ ಕ್ರಷಿ ಭೂಮಿಯನ್ನು ಸ್ವಾಧೀನ ಪಡಿಸಿದಾಗ ಸ್ಥಳೀಯರಿಗೆ ಉದ್ಯೋಗದ ಭರವಸೆಯನ್ನು ಕಂಪನಿ ಹಾಗೂ ಸರಕಾರ ನೀಡಿತ್ತು ಆದರೆ ಮನೆಮಠ ,ಫಲವತ್ತಾದ ಕ್ರಷಿ ಭೂಮಿಯನ್ನು ಕಳೆದುಕೊಂಡವರು ಹದಿನೈದು ವರ್ಷಗಳು ಕಳೆದರೂ ಉದ್ಯೋಗಕ್ಕಾಗಿ ಕಛೇರಿಯಿಂದ ಕಛೇರಿಗೆ ಅಲೆದಾಡುತ್ತಿದ್ದಾರೆ ಎಂದು ಅವರು ವಿಷಾಧಿಸಿದ್ದಾರೆ.

ಕರಾವಳಿಯ ಜನರಿಗೆ ಇದ್ದ ನೌಕರಿಯನ್ನೂ ಕಂಪನಿ ಕಿತ್ತುಕೊಂಡು ಎಲ್ಲಾ ನೇಮಕಾತಿಗಳ ಸಂದರ್ಭದಲ್ಲೂ ಪರರಾಜ್ಯದವರನ್ನು ನೇಮಿಸುವ ಮೂಲಕ ಕಂಪನಿ ಸ್ಥಳೀಯರಿಗೆ ಅನ್ಯಾಯ ಮಾಡುತ್ತಿದೆ . ಇದನ್ನು SDPI ಕಟುವಾಗಿ ಖಂಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ

- Advertisement -

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ರಲ್ಲಿ 12 ಮಂದಿ ಶಾಸಕರು ಹಾಗೂ ಇಬ್ಬರು ಸಂಸದರು ಬಿಜೆಪಿ ಪಕ್ಷದವರು, ಜಿಲ್ಲೆಯ ಜನತೆಗೆ ಅನ್ಯಾಯ ಆದಾಗ ಇವರೇನು ಮಾಡುತಿದ್ದಾರೆ?, ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ಕೊಡಲು, ಕೋಮು ಪ್ರಚೋದನಕಾರಿ ಭಾಷಣ ಮಾಡಲು ಮಾತ್ರ ನಿಮ್ಮನ್ನು ಜನತೆ ಆರಿಸಿ ಕಳಿಸಿದ್ದಾರಾ? ಎಂದು ಅಥಾವುಲ್ಲಾ ಪ್ರಶ್ನಿಸಿದ್ದಾರೆ.

ಇಲ್ಲಿನ ಸಂಸದರಿಗೆ ಶಾಸಕರಿಗೆ ತನ್ನನ್ನು ಚುನಾಯಿಸಿದ ಜನತೆಯ ಮೇಲೆ ಸ್ವಲ್ಪವಾದರೂ ಋಣ ಇರುವುದಾದರೆ ಕೂಡಲೇ  ಈ ನೇಮಕಾತಿಯನ್ನು ರದ್ದುಗೊಳಿಸಿ ಸ್ಥಳೀಯ ಸಂತ್ರಸ್ಥರನ್ನು ಹಾಗೂ ವಿದ್ಯಾವಂತ ಕನ್ನಡಿಗರನ್ನು ನೇಮಕ ಗೊಳಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಇತರ ಸಂಘಟನೆಗಳ ಜೊತೆಗೂಡಿ ಬ್ರಹತ್ ಹೋರಾಟವನ್ನು ಹಮ್ಮಿಕೊಳ್ಳಲ್ಲಬೇಕಾದೀತು ಎಂದು ಅವಾರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ 28 ರಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದಾರೆ. ಆದರೂ ಕಳೆದ ಏಳು ವರ್ಷಗಳಿಂದ ಕರ್ನಾಟಕದ ಜನತೆಗೆ ಎಲ್ಲಾ ವಿಧದಲ್ಲೂ ಅನ್ಯಾಯ ವಾಗುತ್ತಿದೆ, ಬ್ಯಾಂಕಿಂಗ್, ರೈಲ್ವೆ, ಅಂಚೆ, ವಿಮೆ, ರಕ್ಷಣಾ ಇಲಾಖೆ ಸೇರಿದಂತೆ ಬಹುತೇಕ ಸರಕಾರಿ ಒಡೆತನದ ಸಂಸ್ಥೆಗಳ ಹುದ್ದೆಗಳು ಉತ್ತರ ಭಾರತೀಯರ ಪಾಲಾಗುತ್ತಿದೆ. ಈ ಮೂಲಕ ಕೇಂದ್ರ ಸರಕಾರವು ಕರ್ನಾಟಕವನ್ನು ಹಿಂದೀಕರಣದ ಮಾಡಲು ಹೊರಟಿದೆ, ಆದರೂ ನಮ್ಮ ಸಂಸದರು ತುಟಿ ಬಿಚ್ಚುತ್ತಿಲ್ಲ ಇದು ಬಹುಶಃ ಮೋದಿ, ಅಮಿತ್ ಶಾ ಭಯವಾಗಿರಬಹುದು, ಇಂತಹ ಗುಲಾಮಗಿರಿಯ ರಾಜಕೀಯ ಜೀವನ ಮಾಡುದಕ್ಕಿಂತ ಸ್ವಾಭಿಮಾನದಿಂದ ರಾಜಕೀಯ ನಿವೃತ್ತಿ ಪಡೆದು ಮನೆಯಲ್ಲಿ ಕುಳಿತುಕೊಳ್ಳುವುದು ಉತ್ತಮ ಎಂದು ಬಿಜೆಪಿ ಸಂಸದರ ವಿರುದ್ಧ ಅಥಾವುಲ್ಲಾ ಕಿಡಿಕಾರಿದ್ದಾರೆ .

ಈಗಾಗಲೇ MRPL  ಪ್ರಕಟಿಸಿರುವ ಉದ್ಯೋಗ ನೇಮಕಾತಿಯನ್ನು ರದ್ದುಗೊಳಿಸಬೇಕು ಹಾಗೂ ಹೊಸ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಇಲ್ಲದೇ ಇದ್ದಲ್ಲಿ ಬಿಜೆಪಿ ಸಂಸದರ ಮನೆಮುಂದೆ ಧರಣಿ ಹಾಗೂ ಕರಿಪತಾಕೆ  ಪ್ರದರ್ಶಿಸುವ ಮೂಲಕ ಹೋರಾಟ ಮುಂದುವರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

Join Whatsapp