ಪಕ್ಷಾಂತರ ನಿಷೇಧ ಕಾಯ್ದೆಯಡಿ ಮೂವರು ಬಿಜೆಪಿ ಪುರಸಭೆ ಸದಸ್ಯೆಯರ ಸದಸ್ಯತ್ವ ರದ್ದು

Prasthutha|

ಬೆಂಗಳೂರು : ಮಹಾಲಿಂಗಾಪುರ ಪುರಸಭೆಯಲ್ಲಿ ಕಳೆದ ವರ್ಷನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ, ಪ್ರತಿಪಕ್ಷವನ್ನು ಬೆಂಬಲಿಸಿದ್ದ ಮೂವರು ಬಿಜೆಪಿ ಸದಸ್ಯೆಯರ ಸದಸ್ಯತ್ವ ರದ್ದಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ಮೂವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದ್ದಾರೆ.

- Advertisement -

ಸ್ಥಳೀಯ ಜೆಎಲ್‌ ಬಿಸಿ ಅತಿಥಿಗೃಹದ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ೨೦೨೦ ನ.೯ರಂದು ನಡೆದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಗೋದಾವರಿ ಬಾಟ ಪಕ್ಷದ ವಿಪ್‌ ಉಲ್ಲಂಘನೆ ಮಾಡಿದ್ದರು. ಈ ಮೂವರ ಸದಸ್ಯತ್ವ ರದ್ದತಿಗೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿತ್ತು.

ಇದೀಗ ಹಲವು ಬಾರಿ ವಾದ-ಪ್ರತಿವಾದ ನಡೆದು ಅಂತಿಮವಾಗಿ ವಿಪ್‌ ಉಲ್ಲಂಘನೆ ಸಾಬೀತಾಗಿದೆ. ಹೀಗಾಗಿ ಈ ಮೂವರು ಸದಸ್ಯೆಯರ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.



Join Whatsapp