ಪೆಲೆಸ್ತೀನ್‌ ಪರ ಪೋಸ್ಟ್‌ ಹಾಕಿದ್ದಕ್ಕೆ ಯುವ ಪತ್ರಕರ್ತೆ ಸುದ್ದಿ ಸಂಸ್ಥೆಯಿಂದ ವಜಾ

Prasthutha|

ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಪೆಲೆಸ್ತೀನ್‌ ಪರ ಮಾಡಿದ ಪೋಸ್ಟ್‌ ಗಾಗಿ ಅಸೋಸಿಯೇಟೆಡ್‌ ಪ್ರೆಸ್‌ ಸುದ್ದಿ ಸಂಸ್ಥೆಯಿಂದ ಪತ್ರಕರ್ತೆ ಎಮಿಲಿ ವೈಲ್ಡರ್‌ ವಜಾಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ತಾವು ವಸ್ತು ನಿಷ್ಠತೆ ಮತ್ತು ಸಮಾಜ ಮಾಧ್ಯಮದ ನಿಯಮಾವಳಿಯ ಅಸಮಾನ ಜಾರಿಯ ಸಂತ್ರಸ್ತೆ ಎಂದು ಹೇಳಿದ್ದಾರೆ.

- Advertisement -

ಮಧ್ಯಪ್ರಾಚ್ಯ ಸ್ಥಿತಿಗತಿ ಬಗ್ಗೆ ಟ್ವೀಟ್‌ ಮಾಡುತ್ತಿದ್ದ ಎಮಿಲಿಯವರನ್ನು ಎಪಿ ಸುದ್ದಿ ಸಂಸ್ಥೆ ವಜಾ ಮಾಡಿದೆ. ಪ್ರಾಮಾಣಿಕ ಸಿಟ್ಟು ಅಥವಾ ನ್ಯಾಯದ ಬಗ್ಗೆ ಒಲವು ಹೊಂದಿದ ಪರಿಣಾಮಬೀರಬಲ್ಲ ವಿಷಯ ಹೇಳಹೊರಟಿರುವ ಯುವ ಜನಾಂಗಕ್ಕೆ ನೀವು ಯಾವ ಸಂದೇಶ ನೀಡಲು ಬಯಸಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನ ಧ್ವನಿಯನ್ನು ಹತ್ತಿಕ್ಕಿ ದಮನಿಸಲಾಗದು. ನಾನು ಶೀಘ್ರವೇ ಹಿಂದಿರುಗುತ್ತೇನೆ ಎಂದು ಅವರು ಹೇಳಿದ್ದಾರೆ.

- Advertisement -

ಬಲಪಂಥೀಯ ಚಳವಳಿಗಾರರು, ರಾಜಕಾರಣಿಗಳು ಮತ್ತು ಮಾಧ್ಯಮದವರ ಕಳಂಕ ಹಚ್ಚುವ ಅಪಪ್ರಚಾರಗಳು, ತನ್ನನ್ನು ವಜಾಗೊಳಿಸಲು ಕಾರಣವಾದವು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಲೆಸ್ತೀನ್‌ ಪರ ಪೋಸ್ಟ್‌ ಗಳು ನನ್ನ ಉದ್ಯೋಗಕ್ಕೆ ಕುತ್ತು ತರಲಾರವು ಎಂದು ಸಂಪಾದಕರು ಈ ಹಿಂದೆ ಭರವಸೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.  



Join Whatsapp