ಕರ್ನಾಟಕ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ತೀರ್ಮಾನಗಳು

Prasthutha|

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕೋವಿಡ್ ಕಾರ್ಯಪಡೆ ನಿಯೋಜಿಸಿದ್ದು, ಡಿಸಿಎಂ ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿರುವ ಕೋವಿಡ್ ಕಾರ್ಯಪಡೆ ಸಭೆ ಇಂದು (ಶನಿವಾರ) ನಡೆದಿದೆ. ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅವು ಈ ಕೆಳಗಿನಂತಿವೆ.

- Advertisement -


1.  ಕೋವ್ಯಾಕ್ಸಿನ್- ಇನ್ನು ಬರೇ 2ನೇ ಡೊಸ್ ಮಾತ್ರ ಕೊಡುವುದು. ಮೊದಲ ಡೋಸ್ ಪಡೆದು 6 ವಾರ ಆಗಿರುವವರು ಮಾತ್ರ 2ನೇ ಡೋಸ್ ಲಸಿಕೆ ಪಡೆಯಬೇಕು. 
2. ಕೋವಿಶೀಲ್ಡ್- 45+ ರವರಿಗೆ ಮೊದಲನೇ dose ನೀಡಲು ಆದ್ಯತೆ. ಮೊದಲ ಡೋಸ್ ಪಡೆದು 12 ವಾರ ಆದವರಿಗೆ ಮಾತ್ರ 2ನೇ ಡೋಸ್ ಕೊಡಬೇಕು. ಅದಕ್ಕೂ ಮೊದಲು ಯಾರಿಗೂ ಎರಡನೇ ಡೋಸ್ ಕೊಡುವಂತಿಲ್ಲ. 
3. ಲಸಿಕೆ ದಾಸ್ತಾನು ನೋಡಿಕೊಂಡು 18- 44 ವರ್ಷದವರಿಗೆ ಯಾವ ದಿನಾಂಕ ದಿಂದ ಲಸಿಕೆ ಕೊಡಬೇಕು ಎಂಬುದರ ತೀರ್ಮಾನ. 

4.  ಯಾರಿಗೆ ಆದ್ಯತೆ ಮೇಲೆ ಲಸಿಕೆ ಕೊಡಬೇಕು ಎಂಬುದನ್ನು ನಿರ್ಧರಿಸಲು ಮೊದಲು ಪಟ್ಟಿ ಮಾಡಬೇಕು. ಅಂಚೆ ಇಲಾಖೆ, ಕೃಷಿ ಇಲಾಖೆ, ಡೆಲಿವರಿ ಬಾಯ್ಸ್, ಬ್ಯಾಂಕ್ ಸಿಬ್ಬಂದಿ, ಇಂಟರ್ ನೆಟ್ ಪ್ರೊವೈಡರ್ಸ್  ಇತ್ಯಾದಿ. 
5.  ಲಸಿಕೆ ಕೊಡುವುದನ್ನು ಆಸ್ಪತ್ರೆಗಳಿಂದ ಹೊರಗೆ ಮಾಡಲು ತೀರ್ಮಾನ. ಶಾಲೆ ಮೈದಾನ ಇತ್ಯಾದಿ ಕಡೆ .
6. ಕೊವಿಡ್ ಮೆಡಿಕಲ್ ತ್ಯಾಜ್ಯ ವಿಲೇವಾರಿ- ಪ್ರತಿ ಬೆಡ್ ಗೆ ಗರಿಷ್ಠ 10 ರೂಪಾಯಿ ನೀಡಲು ತೀರ್ಮಾನ. ಸರ್ಕಾರಿ ಆಸ್ಪತ್ರೆ ಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಈ ಕ್ರಮ.
7.  ಗ್ರಾಮೀಣ ಭಾಗ/ ನಗರ ಪ್ರದೇಶಗಳ ಕೊಳೆಗೇರಿಗಳಲ್ಲಿ ಹೋಮ್ ಐಸೋಲೇಷನ್ ಇಲ್ಲ. ಗ್ರಾಮೀಣ ಭಾಗದ ಪಿಎಚ್ ಸಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ. ಮನೆ ಮನೆಗೆ ಹೋಗಿ ರಾಟ್ ಟೆಸ್ಟ್ ಮಾಡಬೇಕು. ಪಾಸಿಟಿವ್ ಆದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಬೇಕು. ಗ್ರಾಮೀಣ ಮಟ್ಟದಲ್ಲಿನ ಹಾಸ್ಟೆಲ್ ಇತ್ಯಾದಿ ಕಡೆ ವ್ಯವಸ್ಥೆ. ಇದರ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ನೀಡಲು ತೀರ್ಮಾನ. 
8.  ಖಾಸಗಿ ವೈದ್ಯರು ಸಲಹೆ‌ ನೀಡಿದ ಸೋಂಕಿತರಿಗೂ ಸರ್ಕಾರಿ ಮೆಡಿಕಲ್ ಕಿಟ್ ಕೊಡುವುದು.

- Advertisement -

9.  ವೈರಸ್ ನ ಜೆನೆಟಿಕ್ಸೆ ಬದಲಾವಣೆ ಬಗ್ಗೆ ಅಧ್ಯಯನ ನಡೆಸುವ Genome Lab ಗಳನ್ನು ರಾಜ್ಯದ ಆರು ಕಡೆ ಸ್ಥಾಪಿಸಲು ತೀರ್ಮಾನ. ನಾಲ್ಕು ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಎರಡು, ಆರೋಗ್ಯ ಇಲಾಖೆ ವತಿಯಿಂದ ಮಾಡಲು ತೀರ್ಮಾನ. 

10.  ಮುಂದಿನ 90 ದಿನಗಳಿಗೆ ಅಗತ್ಯ ಇರುವ ಔಷಧ ಮತ್ತು ಪರಿಕರಗಳನ್ನು ಹಂತ ಹಂತವಾಗಿ 260  ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಟೆಂಡರ್ ಮೂಲಕ ಖರೀದಿಸಲು ತೀರ್ಮಾನ. 

11.  Black Fungal-  ಪ್ರತಿ ವಾರ 400 ರೋಗಿಗಳಿಗೆ ಈ ರೀತಿ ಬ್ಲಾಕ್ ಫೋಂಗಲ್ ಬರುವ ನಿರೀಕ್ಷೆ ಇದೆ. ವಾರಕ್ಕೆ 20,000 vials ಬೇಡಿಕೆಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. 

12. ಆಮ್ಲಜನಕ ಬಳಕೆಯನ್ನು ನಿಯಂತ್ರಣ ಮಾಡುವ DRDO ಅಭಿವೃದ್ಧಿ ಪಡಿಸಿರುವ 1,000 ಯಂತ್ರಗಳನ್ನು ಪ್ರಾಯೋಗಿಕ ವಾಗಿ ಬಳಸಲು ತೀರ್ಮಾನ. ಇದಕ್ಕೆ 6ರಿಂದ 10 ಸಾವಿರ ಆಗುತ್ತದೆ.

13. ಆಮ್ಲಜನಕ ಬಾಟ್ಲಿಂಗ್ ಯುನಿಟ್ ಗಳನ್ನು ಕೆಲವು ಕಡೆ ಸ್ಥಾಪಿಸುವುದು. 

14.  ಲಸಿಕೆ- ಜಾಗತಿಕ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ‌843 ಕೋಟಿ ಅನುದಾನದ ಅವಶ್ಯಕತೆ ಇದ್ದು ಇದಕ್ಕೆ ಕಾರ್ಯಪಡೆ ಒಪ್ಪಿಗೆ ನೀಡಿದೆ. 

15. ರೆಮಿಡಿಸ್ವೀರ್-  5 ಲಕ್ಷ ಇಂಜೆಕ್ಷನ್ ಖರೀದಿಗೆ‌ ಜಾಗತಿಕ ಟೆಂಡರ್. ಇದಕ್ಕೆ 75  ಕೋಟಿ ಮೀಸಲು.

16. ರಾಜ್ಯದ 207 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 ಬೆಡ್ ಇವೆ . ಇದರಲ್ಲಿ 10 ಬೆಡ್ ಐಸಿಯು; ತಾಲ್ಲೂಕು ಆಸ್ಪತ್ರೆ ಗಳಲ್ಲಿ 50 ಬೆಡ್ ಐಸಿಯು ( 15 ventilator, out of this 6 is for pediatric).  ಮೆಡಿಕಲ್ ಕಾಲೇಜು‌ ಇಲ್ಲದ ಜಿಲ್ಲಾ ಕೇಂದ್ರಗಳಲ್ಲಿ ತಲಾ 100 ಬೆಡ್ ‌ಐಸಿಯು‌ ಮಾಡಲು ತೀರ್ಮಾನ.

17. ಬೆಂಗಳೂರು ನಗರ- ಆರೋಗ್ಯವನ್ನು ಬಿಬಿಎಂಪಿ ವ್ಯಾಪ್ತಿ ಯಿಂದ ತೆಗೆದು ಅದನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರಬೇಕು. ತಾಂತ್ರಿಕ ಸಮಸ್ಯೆಗಳು ಇವೆ. ಇದರ ಬಗ್ಗೆ ಅಧ್ಯಯನ ಮಾಡಿ ಮುಂದಿನ ಸಭೆಗೆ ಮಂಡಿಸುವುದು.

18. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ‌ 100 Bed Secondary hospital ನಿರ್ಮಾಣ .

19. Physical triage is compulsory for hospitalisation.

20.  pulse oximeter- 1 lakh.

21.  oxygen generator- ಎಲ್ಲ CHC, TH, DH, ಗಳಲ್ಲಿ ಸ್ಥಾಪಿಸುವುದು.



Join Whatsapp