ಕೋವಿಡ್ ನಿರ್ಬಂಧದ ಹೆಸರಿನಲ್ಲಿ ಕಾರ್ಕಳದ ಮಹಿಳೆಯ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು SDPI ಆಗ್ರಹ

Prasthutha|

ಲಾಕ್‌ಡೌನ್ ನೆಪವೊಡ್ಡಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯ ಮಹಿಳೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಂತೆ  ತಡೆಹಿಡಿದು ಮಹಿಳೆಯ ಸಾವಿಗೆ ಕಾರಣರಾದ ಪೋಲೀಸರನ್ನು ತಕ್ಷಣ ಅಮಾನತುಗೊಳಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಅಧ್ಯಕ್ಷರಾಗಿರುವ ಇಲಿಯಾಸ್ ಸಾಸ್ತಾನ ಆಗ್ರಹಿಸಿದ್ದಾರೆ.

- Advertisement -

ಮಹಿಳೆಗೆ ಎದೆ ನೋವು ಹಾಗೂ ಉಸಿರಾಟದ ತೊಂದರೆ ಇರುವ ಬಗ್ಗೆ ಪೊಲೀಸರಿಗೆ ತಿಳಿಸಿದರೂ ಸಹ ಸೂಕ್ತ ಸಮಯಕ್ಕೆ ಮಹಿಳೆಗೆ ಆಸ್ಪತ್ರೆಗೆ ಹೋಗಲು ಅವಕಾಶ ನೀಡದ ಪೋಲೀಸರ ಕ್ರಮ ಅತ್ಯಂತ ಅಮಾನವೀಯವಾಗಿದೆ. ಮುಂಬರುವ ದಿನಗಳಲ್ಲಿ ಕೋವಿಡ್ ನಿರ್ಬಂಧದ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಮರುಕಳಿಸ ಬಾರದಂತೆ ಜಿಲ್ಲಾಡಳಿತವು ಕ್ರಮ ಕೈಗೊಳ್ಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಸರಕಾರದ ಲಾಕ್ಡೌನ್ ಮಾರ್ಗಸೂಚಿಯಂತೆ ವಾಹನಗಳನ್ನು ರಸ್ತೆಗಿಳಿಸಬಾರದು ಎಂಬ ಆದೇಶದಿಂದ ಸಾರ್ವಜನಿಕರು ಗೊಂದಲ ಹಾಗೂ ಸಂಕಷ್ಟಕ್ಕೆ ಒಳಗಾಗಿದ್ದಾರೆ.

- Advertisement -

ಗ್ರಾಮಿಣ ಪ್ರದೇಶದ ಓಡಾಟಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ ಅಲ್ಲದೇ ಖಾಸಗಿ ವಾಹನ ಸಂಚಾರಕ್ಕೂ ಈಗ ನಿರ್ಬಂಧ ವಿಧಿಸಿರುತ್ತಾರೆ.

ಅಗತ್ಯ ವಸ್ತು ಖರೀದಿಗೆ  ಗ್ರಾಮಿಣ ಪ್ರದೇಶಗಳಿಂದ ಪೇಟೆಗೆ ಬರುವ ಜನರು 4 ರಿಂದ 5 ಕಿಲೋಮೀಟರ್ ನಡೆದು ಬರುವುದು ಸಾಧ್ಯವಿಲ್ಲ. ಅಲ್ಲದೇ ಅಗತ್ಯ ವಸ್ತು ಖರೀದಿಗೆ ನಿಗದಿಪಡಿಸಿರುವ ಬೆಳಿಗ್ಗೆ 6 ಗಂಟೆ ಯಿಂದ 10 ಗಂಟೆಯ  ಈ ಸಮಯದಲ್ಲಿ ವೃದ್ದರು, ಸ್ತ್ರಿಯರು, ಅನಾರೋಗ್ಯದಿಂದ ಬಳಲುತ್ತಿರುವವರು ಅಷ್ಟೊಂದು ದೂರ ನಡೆದು ಕ್ರಮಿಸುವುದು ಕೂಡ ಅಸಾಧ್ಯವಾಗಿರುತ್ತದೆ.

ನಿಗದಿತ ಸಮಯದಲ್ಲಿ ದಿನಸಿ ಅಗತ್ಯ ವಸ್ತುಗಳನ್ನು ಖರೀದಿಸುವ ದಾವಂತ ಒಂದು ಕಡೆಯಾದರೆ ಓಡಾಟಕ್ಕೆ ವಾಹನ ಬಳಸುವಂತಿಲ್ಲ ಎಂಬ ಸರಕಾರದ ಆದೇಶ ಜನಸಾಮಾನ್ಯರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.

ಅದ್ದರಿಂದ ತಾವು ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುವು ಮಾಡಿಕೊಟ್ಟಂತೆ  ಸರಕಾರ ನಿಗದಿಪಡಿಸಿದ ಸಮಯದಲ್ಲಿ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ಇನ್ನಿತರ ತುರ್ತು ಸೇವೆಗಳಿಗೆ ತಮ್ಮ ಸ್ವಂತ ವಾಹನ ಬಳಸಲು ಅಥವಾ ಅಟೋ ರಿಕ್ಷಾಗಳಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಹಾಗೂ ಲಾಕ್ ಡೌನ್ ಕಾರಣದಿಂದ ಜನಜೀವನ ದುಸ್ತರವಾಗಿರುವ ಈ ಸಂದರ್ಭದಲ್ಲಿ ವಾಹನವನ್ನು ಮುಟ್ಟುಗೊಲು ಹಾಕುವುದು ಅಥವಾ ದಂಡ ವಿಧಿಸುವುದು ಮಾಡಬಾರದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ಆಗ್ರಹಿಸಿದೆ.



Join Whatsapp