ಕೋವಿಡ್ ಬಿಕ್ಕಟ್ಟು | ಚಾಲಕರಿಗೆ ಆರ್ಥಿಕ ನೆರವು, 2 ತಿಂಗಳ ಉಚಿತ ಪಡಿತರ : ದೆಹಲಿ ಸಿ.ಎಂ ಕೇಜ್ರಿವಾಲ್‌ ಘೋಷಣೆ

Prasthutha|

ನವದೆಹಲಿ: ಕೋವಿಡ್‌ ಮಹಾಮಾರಿ ಸಾಂಕ್ರಮಿಕ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ದೆಹಲಿಯ 72 ಲಕ್ಷ ಪಡಿತರ ಚೀಟಿದಾರರಿಗೆ ಎರಡು ತಿಂಗಳ ಕಾಲ ಉಚಿತವಾಗಿ ಪಡಿತರ ಹಾಗೂ ಆಟೊ-ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ₹5 ಸಾವಿರ ಅರ್ಥಿಕ ನೆರವು ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್  ಕೇಜ್ರಿವಾಲ್‌ ಮಂಗಳವಾರ ಪ್ರಕಟಿಸಿದ್ದಾರೆ.

- Advertisement -

ಕೋವಿಡ್‌ ಸೋಂಕು ಹರಡುವಿಕೆಗೆ  ತಡೆಗೆ ದೆಹಲಿಯಲ್ಲಿ ಎರಡು ತಿಂಗಳವರೆಗೆ ಲಾಕ್‌ಡೌನ್ ಜಾರಿಗೊಳಿಸುವುದಿಲ್ಲ. ಈಗ ದೆಹಲಿಯ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ. ಲಾಕ್‌ಡೌನ್ ಜಾರಿಗೊಳಿಸುವ ಅಗತ್ಯವೂ ಬರುವುದಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕಳೆದ ವರ್ಷದ ಕೋವಿಡ್ ಲಾಕ್‌ಡೌನ್ ಸಂಧರ್ಭದಲ್ಲಿ ಜನರು ಅಸಹಾಯಕರಾಗಿರುವಾಗ ದೆಹಲಿ ಸರ್ಕಾರ 1.56 ಲಕ್ಷ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ ₹5ಸಾವಿರ ಆರ್ಥಿಕ ನೆರವು ನೀಡಿತ್ತು. ದೇಶದಾದ್ಯಂತ ದೆಹಲಿ ಸರಕಾರ ಕೈಗೊಂಡ ಯೋಜನೆಗಳ ಬಗ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು  ಈ ವರ್ಷವೂ ಅದೇ ರೀತಿ ಅವರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದು ಕೇಜ್ರಿವಾಲ್ ಹೇಳಿದರು.



Join Whatsapp