►ಈ ಬಾರಿಯೂ ಬಿಜೆಪಿ ರಾಜ್ಯಾಧ್ಯಕ್ಷ ಸುರೆಂದ್ರನ್ ಗೆ ಸೋಲು !
ಕೇರಳದ ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಮುಸ್ಲಿಮ್ ಲೀಗಿನ ಅಶ್ರಫ್ ಕೆ ಎಂ 1200 ಮತಗಳ ಅಂತರದಿಂದ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ಈ ಬಾರಿಯೂ ಸೋಲುಂಡಿದ್ದಾರೆ.
ಯುಡಿಎಫ್ ಅಭ್ಯರ್ಥಿ ಅಶ್ರಫ್ ಕೆಎಂ 1143 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ವಿರುದ್ಧ ಈ ಹಿಂದೆ UDF ಅಭ್ಯರ್ಥಿ ಅಬ್ದುಲ್ ರಝಕ್ 89 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ನಂತರ ಅನಾರೋಗ್ಯದಿಂದ ನಿಧನರಾದ ಅಬ್ದುಲ್ ರಝಾಕ್ ಸ್ಥಾನದಲ್ಲಿ UDF ಅಭ್ಯರ್ಥಿ ಎಂ.ಸಿ.ಕಮರುದ್ದೀನ್ ವಿಜಯಿಯಾಗಿದ್ದರು.ಮಂಜೇಶ್ವರ ಕ್ಷೇತ್ರ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಇಟ್ಟ ಕ್ಷೇತ್ರಗಳಲ್ಲಿ ಒಂದಾಗಿತ್ತು.