ಭೂ ಕಬಳಿಕೆ ಆರೋಪ | ತೆಲಂಗಾಣ ಸರ್ಕಾರದ ಆರೋಗ್ಯ ಸಚಿವರ ವಜಾ

Prasthutha|

ತೆಲಂಗಾಣ : ಭೂ ಕಬಳಿಕೆ ಆರೋಪವನ್ನು ಎದುರಿಸುತ್ತಿರುವ ತೆಲಂಗಾಣ ಆರೋಗ್ಯ ಸಚಿವ ಈಟಾಲಾ ರಾಜೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜೇಂದ್ರ ಅವರ ಖಾತೆಯನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ವಹಿಸಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ  ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರ ಕಚೇರಿಯಿಂದ ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಲಾಗಿದೆ.

- Advertisement -

 ‘ತೆಲಂಗಾಣ ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ, ರಾಜ್ಯಪಾಲರು ವೈದ್ಯಕೀಯ, ಆರೋಗ್ಯ ಕಲ್ಯಾಣ ಖಾತೆಯನ್ನು ಈಟಾಲಾ ರಾಜೇಂದ್ರ ಅವರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗೆ ವರ್ಗಾಯಿಸಲು ಅನುಮೋದನೆ ನೀಡಿದ್ದಾರೆ’ ಎಂದು ರಾಜ್ಯಪಾಲರ ಕಛೇರಿ ತಿಳಿಸಿದೆ.

ಆರೋಗ್ಯ ಸಚಿವ ಈಟಾಲಾ ರಾಜೇಂದ್ರ, ತಮ್ಮ ಭೂಮಿಯನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಮೇದಕ್ ಜಿಲ್ಲೆಯ ರೈತರು ಆರೋಪಿಸಿದ್ದಾರೆ ಎಂದು ಹಲವಾರು ತೆಲುಗು ಚಾನೆಲ್ ಗಳು ಏಪ್ರಿಲ್ 30 ರಂದು ಸಂಜೆ ವರದಿ ಮಾಡಿತ್ತು.

- Advertisement -

 ಕೆಸಿಆರ್ ನ ಸಚಿವ ಸಂಪುಟದಿಂದ ವಜಾಗೊಂಡ ಎರಡನೇ ಆರೋಗ್ಯ ಸಚಿವ ಈಟಾಲಾ ರಾಜೇಂದ್ರ.  ತಮ್ಮ ಮೊದಲ ಅವಧಿಯಲ್ಲಿ, ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಾಗಿದ್ದ ಶಾಸಕ ಟಿ.ರಾಜಯ್ಯ ಅವರನ್ನು ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ವಜಾ ಮಾಡಲಾಗಿತ್ತು.



Join Whatsapp