ತೀರ್ಥಹಳ್ಳಿ ಪಟ್ಟಣ ಪಂಚಾಯತ್‌ ನಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಗೆ ಐತಿಹಾಸಿಕ ವಿಜಯ

Prasthutha|

ಶಿವಮೊಗ್ಗ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಸುಮಾರು 25 ವರ್ಷಗಳ ಬಿಜೆಪಿಯ ಆಡಳಿತ ಈ ಮೂಲಕ ಕೊನೆಗೊಂಡಿದೆ. ಪಟ್ಟಣ ಪಂಚಾಯತಿಯ 15 ವಾರ್ಡ್ ಗಳ ಪೈಕಿ 9 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಸ್ಪಷ್ಟ ಬಹುಮತಗಳಿಸಿದೆ.

- Advertisement -

15 ವಾರ್ಡ್ ಗಳ ಪೈಕಿ ಬಿಜೆಪಿ ಕೇವಲ 6 ವಾರ್ಡ್ ಗಳಲ್ಲಿ ಮಾತ್ರ ಗೆದ್ದಿದೆ. ಕಳೆದ ಸುಮಾರು 25 ವರ್ಷದಿಂದ ನಿರಂತರವಾಗಿ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧಿಕಾರ ಚುಕ್ಕಾಣಿ ಹಿಡಿದಿದ್ದು. ಆದರೆ ಈ ಬಾರಿ ಜನರು ಬಿಜೆಪಿಯನ್ನು ಜನರು ತಿರಸ್ಕರಿಸಿದ್ದು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ.

ಪಟ್ಟಣ ಪಂಚಾಯತ್  ಅಧಿಕಾರವನ್ನು ಹಿಡಿಯಲೇ ಬೇಕೆಂದು ಬಿಜೆಪಿಯ ಘಟಾನು ಘಟಿ ನಾಯಕರಾದ ಸಚಿವ ಕೆ.ಎಸ್ ಈಶ್ವರಪ್ಪ , ಸಂಸದ ರಾಘವೇಂದ್ರ ಮತ್ತು ಶಾಸಕ ಅರಗ ಜ್ಞಾನೇಂದ್ರ ಅವರು ನಿರಂತರ ಚುನಾವಣಾ ಪ್ರಚಾರ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

- Advertisement -

ಕಾಂಗ್ರೆಸ್ ನಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಇತ್ತೀಚ್ಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಆರ್.ಎಂ ಮಂಜುನಾಥ್ ಹಾಗೂ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಒಗ್ಗಟ್ಟಿನಿಂದ ಭರ್ಜರಿ ಪ್ರಚಾರ ನಡೆಸಿ ಪಟ್ಟಣ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.



Join Whatsapp