ಸರಕಾರದಿಂದ ದಿಢೀರ್ ಪರಿಷ್ಕೃತ ಕೋವಿಡ್ ಮಾರ್ಗಸೂಚಿ | ಲಂಗು ಲಗಾಮಿಲ್ಲದ ಸರ್ಕಾರಿ ನಿರ್ಧಾರಗಳಿಗೆ ಮಂಗಳೂರಿನಲ್ಲಿ ವರ್ತಕರಿಂದ ತೀವ್ರ ಆಕ್ರೋಶ !

Prasthutha|

ಮಂಗಳೂರು : ಕರ್ನಾಟಕ ರಾಜ್ಯ ಸರಕಾರದಿಂದ ಕೋವಿಡ್ ನಿಗ್ರಹಿಸಲು ನೂತನ ಮಾರ್ಗಸೂಚಿ ಪ್ರಕಟಗೊಂಡಿದೆ. ಈ ದಿಢೀರ್ ಪರಿಷ್ಕೃತ  ಮಾರ್ಗಸೂಚಿಯ ಪ್ರಕಾರ ಅಗತ್ಯ ಸೇವೆ ಹೊರತುಪಡಿಸಿ ಬಾಕಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕಾಗಿದೆ. ಇದರ ಅನ್ವಯ ಮಂಗಳೂರಿನಲ್ಲಿಂದು ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ.

- Advertisement -

ರಾಜ್ಯ ಸರಕಾರದ ಲಂಗು ಲಗಾಮಿಲ್ಲದ ಬೇಕಾಬಿಟ್ಟಿ ಆದೇಶಗಳ ವಿರುದ್ಧ  ಸ್ಥಳೀಯ ಅಂಗಡಿ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಸರಕಾರದ ಬೇಕಾಬಿಟ್ಟಿ ನಿರ್ಧಾರಗಳ ಕುರಿತು ವರ್ತಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮಾರ್ಕೆಟ್ ಪರಿಸರದಲ್ಲಿ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಅಂಗಡಿ ವ್ಯವಹಾರ ನಡೆಸುತ್ತಿದ್ದ ಅಂಗಡಿಗಳ ಲೈಸನ್ಸ್ ರದ್ದುಪಡಿಸಲು ಮನಪಾ ಅಧಿಕಾರಿಗಳು ಸೂಚಿಸಿದ್ದಾರೆ.



Join Whatsapp