ಮೋದಿ ತವರೂರಿನಲ್ಲಿ ಮಸೀದಿಗಳೇ ಈಗ ಕೋವಿಡ್ ಚಿಕಿತ್ಸಾ ಕೇಂದ್ರಗಳು !

Prasthutha|

ಕೋಮು ಸಂಘರ್ಷಕ್ಕೆ ಹೆಸರಾದ ಗುಜರಾತಿನಲ್ಲಿ ಜಾತಿ, ಮತ, ಧರ್ಮವನ್ನು ಮರೆತು ದಾರುಲ್ ಉಲೂಮ್ ಮಸ್ಜಿದ್ ಕೋವಿಡ್ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಯಾಗಿ ಬದಲಾಗಿದೆ.

- Advertisement -

ಕೋವಿಡ್ ರೋಗಗಳಿಗಾಗಿ 142 ಬೆಡ್ ಗಳಿರುವ ಆಸ್ಪತ್ರೆಯಾಗಿ ಬದಲಾಗಿರುವ ದಾರುಲ್ ಉಲೂಮ್ ಮಸೀದಿ ಕಳೆದ ವರ್ಷ ಕೋವಿಡ್ ತೀವ್ರವಾಗಿದ್ದಾಗ ವಿದ್ಯಾ ಸಂಸ್ಥೆಗಳನ್ನೂ ಕೂಡಾ ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಮಾಡಲು ಅನುಮತಿ ನಿರಾಕರಿಸಲ್ಪಟ್ಟ ಸಂದರ್ಭ192 ಬೆಡ್ ಗಳ ಆಸ್ಪತ್ರೆಯಾಗಿ ಮಾರ್ಪಾಡಾಗಿತ್ತು.

ಕೋವಿಡ್ ನಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದವರು ಈ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಸೋಂಕಿತ ವೈದ್ಯರು, ಆರೋಗ್ಯ ಕಾರ್ಯಕರ್ತರು, ದಾದಿಯರು ದಾಖಲಾಗಿದ್ದರು.  ಅವರಿಗಾಗಿ ಹಣ್ಣು ಹಂಪಲು, ಡ್ರೈ ಫ್ರೂಟ್ಸ್, ಹಾಲು, ಬಿಸ್ಕತ್ತುಗಳು ಇರುವ ಫ್ರಿಡ್ಜ್ ಕೂಡಾ ಅಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯೂ ಅದೇ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ದಾರುಲ್ ಉಲೂಮ್ ಮ್ಯಾನೇಜಿಂಗ್ ಟ್ರಸ್ಟಿ ಆರೀಫ್ ಹಕೀಂ ಫಲಾಹಿ ಹೇಳುತ್ತಾರೆ.

- Advertisement -

ಮೋಗಲ್ವಾಡದಲ್ಲಿರುವ ಮಸೀದಿಯನ್ನೂ ಕೂಡ 50 ಬೆಡ್ ಗಳ ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ.



Join Whatsapp