ಕಾಂಗ್ರೆಸ್ ಸೇರ್ಪಡೆ ಬಗ್ಗೆ ಶ್ರೀರಾಮುಲು ಹೇಳಿದ್ದೇನು..?

Prasthutha|

ಬಳ್ಳಾರಿ: ಕಾಂಗ್ರೆಸ್ ನಿಂದ ಆಫರ್ ಬಂದಿರಲಿ, ಬರದಿರಲಿ. ಯಾರೇ ಕರೆದರೂ ಹೋಗಲು ನನ್ನ ಮನಸ್ಥಿತಿ ಇರಬೇಕು. ಬಿಜೆಪಿ ನನ್ನ ತಾಯಿ. ನನಗೆ ಗೌರವ ಕೊಟ್ಟಿರುವ ಕಾಂಗ್ರೆಸ್ ನವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

- Advertisement -


ಬಿಜೆಪಿಯಲ್ಲಿ ರೆಬೆಲ್ ಆಗಿರುವ ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಾಂಗ್ರೆಸ್ ನಾಯಕರು ಆಹ್ವಾನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.


ನಾವು ಒಳ್ಳೆಯವರಿದ್ದರೇನೆ ಕರೆಯುವುದು. ರಾಮುಲು ಒಳ್ಳೆಯವರಾಗಿ ಕಂಡಿದ್ದಾರೆ. ನನ್ನ ಮೇಲೆ ಗೌರವದಿಂದ ಇಟ್ಟಿದ್ದಾರೆ. ಅದಕ್ಕೆ ಆ ಗೌರವದಿಂದ ಕರೆಯುತ್ತಿದ್ದಾರೆ. ಕಾಂಗ್ರೆಸ್ ನವರು ರಾಜಕೀಯ ಹೊರತುಪಡಿಸಿ, ಅಭಿಮಾನದಿಂದ ಮಾತನಾಡಿದ್ದಾರೆ ಎಂದರು.

- Advertisement -


ಇನ್ನೂ ಕಾಂಗ್ರೆಸ್ ಸೇರುತ್ತೀರಾ ಎನ್ನುವ ವಿಚಾರಕ್ಕೂ ಪ್ರತಿಕ್ರಿಯಿಸಿದ ರಾಮುಲು, ಮಾಧ್ಯಮದ ಮೂಲಕ ಕಾಂಗ್ರೆಸ್ ನವರು ಬಹಿರಂಗವಾಗಿ ಕರೆಯುತ್ತಿದ್ದಾರೆ. ಏನೇ ಮಾಡಬೇಕಿದ್ದರೂ ನಿಮ್ಮನ್ನೆಲ್ಲಾ ಕೂರಿಸಿಕೊಳ್ಳುತ್ತೇನೆ. ಎಲ್ಲವನ್ನೂ ಓಪನ್ ಆಗಿ ಹೇಳುತ್ತೇನೆ. ಹಾಗಿದ್ದಲ್ಲಿ ನಿಮಗೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.



Join Whatsapp