ಮಂಗಳೂರು: ಕಲರ್ಸ್ ಸೆಲೂನ್ ಮೇಲೆ ಹಿಂದುತ್ವ ಕಾರ್ಯಕರ್ತರಿಂದ ದಾಳಿ

Prasthutha|

ಮಂಗಳೂರು: ಬಿಜೈ ಕೆಎಸ್ ಆರ್ ಟಿಸಿ ಬಳಿಯ ಕಲರ್ಸ್ ಸೆಲೂನ್ ಮೇಲೆ ಹಿಂದುತ್ವ ಕಾರ್ಯಕರ್ತರು ದಾಳಿ ನಡೆಸಿದ್ದಾರೆ‌.

- Advertisement -

ಹಿಂದುತ್ವ ಕಾರ್ಯಕರ್ತರು ಸೆಂಟರ್‌ಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದು, ಕಿಟಕಿಗಳ ಗಾಜುಗಳನ್ನು ಪುಡಿಗೈದಿದ್ದಾರೆ.

ಮಸಾಜ್ ಪಾರ್ಲರ್ ಒಳಗಿನ ಪೀಠೋಪಕರಣ, ಕಂಪ್ಯೂಟರ್ ಸೆಟ್, ಟೇಬಲ್ ಗಳನ್ನು ಪುಡಿಗಟ್ಟಿದ್ದು, ಅಲ್ಲಿದ್ದ ಹುಡುಗಿಯರಿಗೆ ನೀವು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೀರಾ ಎಂದು ಆವಾಜ್ ಹಾಕಿದ್ದಾರೆ.  ಅಲ್ಲದೇ ಪಾರ್ಲರ್‌ನಲ್ಲಿ ಇದ್ದ ಯುವತಿಯರ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.



Join Whatsapp