ಭಾರತದ ಎಲ್ಲಾ ಶಾಖೆಗಳನ್ನು ಮುಚ್ಚಲು ತೀರ್ಮಾನಿಸಿದ ಸಿಟಿ ಬ್ಯಾಂಕ್ !

Prasthutha|

ಅಮೆರಿಕಾ ಮೂಲದ ಭಾರತದ ಹಳೆಯ ಬ್ಯಾಂಕುಗಳಲ್ಲಿ ಒಂದಾಗಿರುವ ಸಿಟಿ ಬ್ಯಾಂಕ್ ಭಾರತದಲ್ಲಿನ ತನ್ನ ಸೇವೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಆರ್ ಬಿ ಐ ನ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ. ಭಾರತ ಸೇರಿದಂತೆ ಇತರೆ 13 ರಾಷ್ಟ್ರಗಳಲ್ಲಿ ತನ್ನ ಸೇವೆಗಳನ್ನು ಕೊನೆಗೊಳಿಸಲು ಮುಂದಾಗಿದೆ.

- Advertisement -

ಸಿಟಿ ಬ್ಯಾಂಕ್ ಭಾರತದಲ್ಲಿ ಒಟ್ಟು 35 ಶಾಖೆಗಳನ್ನು ಹೊಂದಿತ್ತು. ಸಾಲ, ಕ್ರೆಡಿಟ್ ಕಾರ್ಡ್ ಸೇರಿದಂತೆ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಬ್ಯಾಂಕ್ ನೀಡುತ್ತಿತ್ತು. ಬ್ಯಾಂಕ್ ಅಧಿಕೃತ ಮೂಲಗಳ ಪ್ರಕಾರ, ಸ್ಪರ್ಧಾ ಸಾಮರ್ಥ್ಯದ ಕಾರಣವನ್ನು ನೀಡಿ ಸಿಟಿ ಬ್ಯಾಂಕ್ ಭಾರತದಲ್ಲಿ ತನ್ನ ಸೇವೆ ಸ್ಥಗಿತಗೊಳಿಸುತ್ತಿದೆ. ಹಂತ ಹಂತವಾಗಿ ಇಲ್ಲಿನ ಸೇವೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕ್ ಉದ್ದೇಶಿಸಿದೆ. ಸದ್ಯ ಗ್ರಾಹಕ ಸೇವೆಗಳು ಮುಂದುವರೆಯಲಿದೆ. ಇದರಿಂದಾಗಿ ಭಾರತದಲ್ಲಿನ ಬ್ಯಾಂಕ್ ಉದ್ಯೋಗಿಗಳು ಮತ್ತು ಗ್ರಾಹಕರ ಮೇಲೆ ಯಾವುದೇ ಪರಿಣಾಮ ತಕ್ಷಣಕ್ಕೆ ಇರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಸದ್ಯಕ್ಕೆ 20,000 ಉದ್ಯೋಗಿಗಳು ಸಿಟಿ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಭವಿಷ್ಯದ ಮೇಲೆ ಕಾರ್ಮೋಡ ಕವಿಯಲಿದೆ ಎಂದೇ ಹೇಳಲಾಗುತ್ತಿದೆ. ಇಲ್ಲಿನ ಕಾರ್ಯಾಚರಣೆಗಳನ್ನು ಇತರೆ ಬ್ಯಾಂಕ್ ಗಳಿಗೆ ವಹಿಸಿದಲ್ಲಿ ಅಥವಾ ಆ ಬ್ಯಾಂಕುಗಳಿಗೆ ಸಿಟಿ ಬ್ಯಾಂಕನ್ನು ಮಾರಿದಲ್ಲಿ ಮಾತ್ರ ಈ ಉದ್ಯೋಗಿಗಳಿಗೆ ಕೆಲಸದ ಭದ್ರತೆ ದೊರೆಯಹುದಾಗಿದೆ.



Join Whatsapp