ಗೋಹತ್ಯೆ ಪ್ರಕರಣ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿದ್ದು, ಕ್ರಮಕ್ಕೆ ಸೂಚನೆ ನೀಡಲಾಗಿದೆ: ಸಚಿವ ಜಿ.ಪರಮೇಶ್ವರ್

Prasthutha|

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ಪ್ರಕರಣ ಹೆಚ್ಚಳವನ್ನು ಗಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ಪ್ರಕರಣ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿ, ಇದಕ್ಕೆ ಏನಾದ್ರೂ ಉಪಾಯ ಕಂಡು ಹಿಡಿಯಬೇಕಿದೆ. ಇಂತ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಮನಸ್ಥಿತಿ ಇರುವವರನ್ನು ಗುರುತಿಸಬೇಕು. ಯಾವುದಾದರೂ ಸಂಘಟನೆ ಇದ್ಯಾ, ಇಂಡುವಿಶ್ಯುಲ್ ಇದ್ದಾರಾ ನೋಡಬೇಕು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಈ ಕುರಿತಂತೆ ಸೂಚನೆ ನೀಡಿರುವೆ ಎಂದರು.


ಮೈಕ್ರೋ ಫೈನಾನ್ಸ್ ದೋಖಾ ವಿಚಾರವಾಗಿ ಪ್ರತಿಕ್ರಿಯಿಸಿ, ಹಣಕಾಸು ಇಲಾಖೆ ಇದಕ್ಕೆ ದಾರಿ ಹುಡುಕಬೇಕು‌. ನಾವು ಮಾಡುವುದಕ್ಕೆ ಬರಲ್ಲ. ಇನ್ನು ಬೀದರ್, ಮಂಗಳೂರು ದರೋಡೆ ಪ್ರಕರಣದ ಮಾಹಿತಿ ಕಲೆಹಾಕಲಾಗಿದೆ. ಶೀಘ್ರವಾಗಿ ಸೆಕ್ಯೂರ್ ಮಾಡುತ್ತೇವೆ. ಅವರು ಬೇರೆ ರಾಜ್ಯದವರು ಅಂತ ಮಾಹಿತಿ ಇದೆ ಎಂದು ಪರಮೇಶ್ವರ್ ಹೇಳಿದರು.



Join Whatsapp