ಮೈಸೂರು: ರಾಜ್ಯದಲ್ಲಿ ಕಳೆದ ದಿನಗಳಿಂದ ಸಾಲು – ಸಾಲು ದರೋಡೆ ಪ್ರಕರಣಗಳು ನಡೆಯುತ್ತಿದೆ. ಬೀದರ್ ನ ಎಟಿಎಂ ರಾಬರಿ ಆಯ್ತು, ಮಂಗಳೂರಿನ ಬ್ಯಾಂಕ್ ರಾಬರಿ ಬಳಿಕ ಇದೀಗ ಮೈಸೂರಿನಲ್ಲಿ ಹಾಡಹಗಲೇ ರೋಡ್ ರಾಬರಿಯಾಗಿದೆ.
ಮೈಸೂರು ಜಿಲ್ಲೆ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಘಟನೆ ನಡೆದಿದ್ದು, ಮುಸುಕುಧಾರಿಗಳು ಕಾರು ಅಡ್ಡಗಟ್ಟಿ ರಾಬರಿ ನಡೆಸಿದ್ದಾರೆ.
‘ಕೇರಳದ ಅಡಿಕೆ ವ್ಯಾಪಾರಿ ಶಫಿ ಮೈಸೂರು- ಮಾನಂದವಾಡಿ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಎರಡು ಕಾರಿನಲ್ಲಿ ಬಂದು ಅವರನ್ನು ಅಡ್ಡಗಟ್ಟಿದ ಗುಂಪು, ಕಾರಿನ ಚಾಲಕ ಹಾಗೂ ಶಫಿ ಅವರನ್ನು ಕೆಳಗೆಳೆದು ಹಾಕಿ, ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.