ಬಹಿರಂಗ ಹೇಳಿಕೆ ಯಾರೂ ಕೊಡಬಾರದು: ರಾಜ್ಯ ಕಾಂಗ್ರೆಸ್​ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್

Prasthutha|

ಬೆಂಗಳೂರು: ಬಹಿರಂಗ ಹೇಳಿಕೆ ಯಾರು ಕೊಡಬಾರದು. ಇದು ನನ್ನ ಸೂಚನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

- Advertisement -

ಸದಾಶಿ‌ವನಗರ ನಿವಾಸದ ಬಳಿ ಮಾತನಾಡಿದ ಅವರು, ಇಂತಹ ಹೇಳಿಕೆ ಯಾರು ಕೊಡಬಾರದು ಇದು ನನ್ನ ಮೊದಲ ಸೂಚನೆ. ಏನೇ ತೀರ್ಮಾನ‌ ಮಾಡುವುದಿದ್ದರೂ ನಾನು, ರಾಹುಲ್‌ ಗಾಂಧಿ, ಸೋನಿಯಾಗಾಂಧಿ ಇದ್ದೇವೆ. ನಾವೆಲ್ಲಾ ಕುಳಿತು ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಬದಲಾವಣೆ, ಬದಲಾವಣೆ ಅಂತೀರಿ. ಎಲ್ಲಿದೆ ಬದಲಾವಣೆ?. ಸೂಕ್ತ ಕಾಲದಲ್ಲಿ ಅಂದ್ರೆ ನಾಳೆ ನಾಡಿದ್ದೇ ಅಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಅನಾವಶ್ಯಕ ಗೊಂದಲ ಉಂಟಾಗುತ್ತಿದೆ. ಎಲ್ಲಾದಕ್ಕೂ ಹೈಕಮಾಂಡ್ ಉತ್ತರಿಸಬೇಕಾ?. ನಿಮಗೆ ಯಾರು ಹೇಳಿಕೆ ಕೊಡು ಅಂದಿದ್ದು. ನೀವೇ ಹೇಳಿಕೆ ಕೊಡ್ತೀರ. ನೀವೆ ಗೊಂದಲ ಮಾಡ್ತೀರ. ಶಾಸಕರು, ಸಚಿವರು, ಎಂಪಿಗಳಿಗೆ ನನ್ನ ಸಲಹೆ ಇಷ್ಟೇ ಯಾರೂ ಬಹಿರಂಗ ಹೇಳಿಕೆ ಕೊಡಬಾರದು. ನಾವು ತೀರ್ಮಾನ ಮಾಡ್ತೇವೆ. ಏನು ಮಾಡಬೇಕು ಅಂತ. ಹಿಂದಿನಿಂದಲೂ ಪದ್ದತಿ ನಡೆದುಕೊಂಡು ಬಂದಿದೆ. ಅದರಂತೆ ನಡೆದುಕೊಂಡು ಹೋಗುತ್ತದೆ ಎಂದರು.



Join Whatsapp