ಗೋವನ್ನು ಕದ್ದು ಬಾಡೂಟ: ಮೋಹನ್, ಚಂದನ್, ಅಜ್ಗರ್ ಸೇರಿ 7 ಮಂದಿಯ ಬಂಧನ

Prasthutha|

ಹಾಸನ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ ಕರುವೊಂದನ್ನು ಕದ್ದು ಬಾಡೂಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

- Advertisement -

ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದ ಹೂವಣ್ಣ ಎಂಬುವವರಿಗೆ ಸೇರಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದು, ಕಡಿದು ಮಾಂಸದೂಟ ಮಾಡಿದ್ದಾರೆ.

ಈ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅದೇ ಗ್ರಾಮದ ಅಜ್ಗರ್, ಕೌಶಿಕ್, ಮೋಹನ್, ಮನೋಜ್, ಚಂದನ್, ಪವನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ.

- Advertisement -

ಕರು ಮಾಲೀಕ ಹೂವಣ್ಣ  ಎಂಬವರು 12 ಹಸುಗಳನ್ನು  ಕೊಟ್ಟಿಗೆಯಲ್ಲಿ ಕಟ್ಟಿ ಮನೆಗೆ ತೆರಳಿದ್ದರು. ಮರುದಿನ  ನೋಡಿದಾಗ ಕರು ನಾಪತ್ತೆಯಾಗಿತ್ತು. ಜ. 16 ರಂದು ಬೆಳಿಗ್ಗೆ ಮಡಬಲು ರೈಲ್ವೆ ಗೇಟಿ ಬಳಿ ಪೊದೆಯಲ್ಲಿ ಪ್ರಾಣಿ ರುಂಡ  ಗಮನಿಸಿ, ತಮ್ಮ ಕರು ಎಂದು ಗುರುತಿಸಿದ್ದರು. ಕರು ಮಾಲೀಕ ಹೂವಣ್ಣ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

‘ಜ. 14 ರಂದು ಮಧ್ಯರಾತ್ರಿ ಕೊಟ್ಟಿಗೆಯಿಂದ ಕರುವನ್ನು ಕದ್ದೊಯ್ದ ದುಷ್ಕರ್ಮಿಗಳು, ಕೊಂದು ಮಾಂಸ ಬೇಯಿಸಿ, ಸೇವಿಸಿದ್ದರು. ರುಂಡ, ಕರುಳು ಹಾಗೂ ಚರ್ಮವನ್ನು ನದಿಗೆ ಎಸೆಯಲು ಪ್ರಯತ್ನಿಸಿದ್ದರೂ,   ನಸುಕಿನಲ್ಲಿ ಜನರ ಓಡಾಟ ಕಂಡು ರುಂಡವನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp