ಕೋಟೆಕಾರು ಬ್ಯಾಂಕಿನಲ್ಲಿ 10 ಕೋಟಿಗೂ ಹೆಚ್ಚು​ ದರೋಡೆ: ಖದೀಮರ ಪ್ಲ್ಯಾನ್ ಹೇಗಿತ್ತು ಗೊತ್ತಾ?

Prasthutha|

ಸಿಸಿ ಕ್ಯಾಮೆರಾ ರಿಪೇರಿಗೆ ನೀಡಿದ ದಿನವೇ ಲೂಟಿ, ಬ್ಯಾಂಕ್ ಸಿಬ್ಬಂದಿ ಮೇಲೆ ಸ್ಥಳೀಯರ ಅನುಮಾನ

- Advertisement -

ಮಂಗಳೂರು: ಉಳ್ಳಾಲ ತಾಲೂಕಿನ ಕೆಸಿ ರೋಡ್‌ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಶಾಖೆಗೆ ನುಗ್ಗಿ ಹಾಡಹಗಲೇ 10 ಕೋಟಿಗೂ ಹೆಚ್ಚು ದರೋಡೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.

ಬೀದರ್‌ ಬಳಿಕ ನಡೆದಿರುವ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

- Advertisement -

ಹಾಡಹಗಲೇ 5 ಮಂದಿ ಆಗಂತುಕರು ಬ್ಯಾಂಕ್‌ ಗೆ ನುಗ್ಗಿ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನ ಒಡವೆ, ನಗದುಗಳೆಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಚಿನ್ನ ಹಾಗೂ ನಗದು ಸೇರಿದಂತೆ ಬರೋಬ್ಬರಿ 10ರಿಂದ 12 ಕೋಟಿ ರೂ ಹಣ ಎಗರಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆಗಂತುಕರು ನಾಲ್ಕೈದು ಚೀಲದಲ್ಲಿ ಹಣ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಪಕ್ಕಾ ಪ್ಲ್ಯಾನ್ ಮಾಡಿ ದರೋಡೆ ಮಾಡಿದ್ದಾರೆ. ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸರ ಹೆಚ್ಚಿನ ಭದ್ರತೆಯಲ್ಲಿದ್ದರು. ಹಾಗೇ ಇಂದು ಶುಕ್ರವಾರ ಆದ ಕಾರಣ ಮುಸ್ಲಿಮರು ನಮಾಜ್​ ಗಾಗಿ ಮಧ್ಯಾಹ್ನ ಮಸೀದಿಗೆ ತೆರಳಿದ್ದಾರೆ. ಇನ್ನು ಬ್ಯಾಂಕ್ ಸಿಸಿ ಕ್ಯಾಮೆರಾ ಕೂಡ ಹಾಳಾಗಿದ್ದು, ಅದನ್ನು ಇಂದೇ ರಿಪೇರಿಗೆ ನೀಡಲಾಗಿತ್ತು. ಸಿಸಿ ಕ್ಯಾಮರಾ ರಿಪೇರಿಗೆ ಮಾಡುವ ವೇಳೆ ಅದರ ವೈಯರ್ ಕಟ್​​ ಮಾಡಿದ ತಕ್ಷಣವೇ ಈ ಕೃತ್ಯ ಎಸಗಿದ್ದಾರೆ. ಇನ್ನು ಇಡೀ ರಸ್ತೆಯ ಉದ್ದಕೂ ಒಂದೇ ಒಂದು ಸಿಸಿಟಿವಿ ಇಲ್ಲ. CCTV ಇಲ್ಲದನ್ನು ಗಮನಿಸಿಯೇ ಬ್ಯಾಂಕ್​​ ದರೋಡೆ ಮಾಡಿದ್ದಾರೆ.

ಇನ್ನು ಬ್ಯಾಂಕಿಗೆ ಒಬ್ಬ ಸೆಕ್ಯೂರಿಟಿ ಕೂಡ ಇಲ್ಲ. ಸ್ಥಳೀಯರು ಬ್ಯಾಂಕ್ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇವರೆಲ್ಲ ಕಪ್ಪು ಬಣ್ಣದ ಫಿಯೆಟ್‌ ಕಾರಿನಲ್ಲಿ ಬ್ಯಾಂಕ್‌ ದರೋಡೆಗೆ ಬಂದಿದ್ದರು. ಬ್ಯಾಂಕ್‌ ನಲ್ಲಿ ಇದ್ದ ಎಲ್ಲಾ ಚಿನ್ನ ಹಾಗೂ ನಗದನ್ನು ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ದರೋಡೆ ಕೃತ್ಯದಿಂದ ಬ್ಯಾಂಕ್‌ ನಲ್ಲಿ ಫೈಲ್‌ ಗಳು, ಪೇಪರ್‌ಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಘಟನೆ ಕುರಿತು ಸಮಗ್ರ ಮಾಹಿತಿ ಪಡೆದ ಮುಖ್ಯಮಂತ್ರಿ, ‘ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟು ಟೋಲ್‌ ಗಳನ್ನು ದಾಟಿ ಹೋಗಿದ್ದಾರೆ? ಟೋಲ್‌ಗಳಲ್ಲಿ ಯಾಕೆ ತಪಾಸಣೆ ಬಿಗಿಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾಗಿ ಮೂಲಗಳು ತಿಳಿಸಿವೆ.

ಸಹಕಾರಿ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಐದಾರು ಮಂದಿ ಮಾತ್ರ ಬ್ಯಾಂಕ್ ಸಿಬ್ಬಂದಿ ಇದ್ದರು. ಆರೋಪಿಗಳು ಕನ್ನಡ ಮತ್ತು ಹಿಂದಿಯಲ್ಲಿ ಮಾತಾಡಿರುವುದು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.‌

ಎಲ್ಲ ಟೋಲ್ ಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂದಿ ಹಾಕಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು ಎಂಬ ಮಾಹಿತಿ ಲಭ್ಯವಾಗಿದೆ.



Join Whatsapp