ಮಂಗಳೂರು: ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣದ ಬಗ್ಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಸೈಫ್ ಅವರು ಈಗ ಔಟ್ ಆಫ್ ಡೇಂಜರ್ ಎಂದು ಸ್ನೇಹಿತನ ಬಗ್ಗೆ ಸುನೀಲ್ ಶೆಟ್ಟಿ ಹೇಳಿದ್ದಾರೆ.
‘ಜೈ’ ಎಂಬ ತುಳು ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪವರ್ಫುಲ್ ಪಾತ್ರ ಮಾಡುತ್ತಿದ್ದಾರೆ. ಶೂಟಿಂಗ್ಗಾಗಿ ಮಂಗಳೂರಿಗೆ ಬಂದಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಸೈಫ್ ಚಾಕು ಇರಿತದ ಘಟನೆ ಕುರಿತು ಸುನೀಲ್ ಮಾತನಾಡಿ, ಸೆಕ್ಯೂರಿಟಿ ಸಮಸ್ಯೆ ಆಗಿರಬಹುದು ಎಂದು ಹೇಳಿದ್ದಾರೆ. ಸೈಫ್ ಗೆ ಏನಾಗಿದೆ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಈ ವಿಚಾರ ನನಗೆ ಗೊತ್ತಾದ ತಕ್ಷಣ ನನಗೆ ಅನಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಲಿ ಎಂಬುದಷ್ಟೇ ಎಂದಿದ್ದಾರೆ
ಸೆಕ್ಯೂರಿಟಿ ಸಮಸ್ಯೆ ಆಗಿರುವಂತೆ ಕಾಣುತ್ತಿದೆ. ನನಗೆ ತುಂಬಾ ತಡವಾಗಿ ವಿಚಾರ ತಿಳಿಯಿತು. ಈಗ ಅವರು ಔಟ್ ಆಫ್ ಡೇಂಜರ್ ಎಂದಿದ್ದಾರೆ. ಬೇಗ ಗುಣಮುಖರಾಗ್ತಾರೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.