ಅದಾನಿ ಸಾಮ್ರಾಜ್ಯ ಅಲುಗಾಡಿಸಿದ್ದ ಸಂಸ್ಥೆ ಕಾರ್ಯಾಚರಣೆ ಸ್ಥಗಿತ

Prasthutha|

►ಕೈಗೆತ್ತಿಕೊಂಡಿದ್ದ ಎಲ್ಲಾ ಕೆಲಸ ಪೂರ್ಣ ಎಂದ ಸಂಸ್ಥಾಪಕ

- Advertisement -


ನವದೆಹಲಿ: ಅದಾನಿ ಸೇರಿದಂತೆ ಹಲವು ಕಾರ್ಪೋರೇಟ್ ದೈತ್ಯರ ಅಕ್ರಮಗಳನ್ನು ಬಯಲಿಗೆಳೆದಿದ್ದ ಅಮೆರಿಕದ ಶಾರ್ಟ್ ಸೆಲ್ಲರ್‌ ಸಂಸ್ಥೆ ಹಿಂಡನ್‌ ಬರ್ಗ್‌ ರಿಸರ್ಚ್‌ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಅಮೆರಿಕ ಮೂಲದ ಸಣ್ಣ ಮಾರಾಟ ಘಟಕವಾಗಿರುವ ಹಿಂಡನ್​ ಬರ್ಗ್​ ಅನ್ನು ವಿಸರ್ಜಿಸಲಾಗುತ್ತಿದ್ದು, ಈ ನಿರ್ಧಾರಕ್ಕೆ ನಿರ್ದಿಷ್ಟ ಕಾರಣ ಇಲ್ಲ. ಯಾವುದೇ ಬೆದರಿಕೆ, ಯಾವುದೇ ಆರೋಗ್ಯ ಸಮಸ್ಯೆ ಮತ್ತು ಯಾವುದೇ ದೊಡ್ಡ ವೈಯಕ್ತಿಕ ಸಮಸ್ಯೆಯೂ ಇಲ್ಲ ಎಂದು ಸಂಸ್ಥಾಪಕ ನಾಟೆ ಆ್ಯಂಡರ್ಸನ್ ಘೋಷಿಸಿದ್ದಾರೆ.

- Advertisement -

ಸಂಸ್ಥೆ ಮುಚ್ಚುವ ಕುರಿತು ತಮ್ಮ ವೆಬ್​ ಸೈಟ್ ​ನಲ್ಲಿ ಪೋಸ್ಟ್​ ಮಾಡಿರುವ ಆ್ಯಂಡರ್ಸನ್​, ಜಗತ್ತಿನಲ್ಲಿ ಅನೇಕ ವಿಚಾರಗಳನ್ನು ಹಾಗೂ ನಾನು ಕಾಳಜಿ ವಹಿಸುವ ವ್ಯಕ್ತಿಗಳನ್ನು ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನನ್ನ ಜೀವನದಲ್ಲಿ ಹಿಂಡನ್​ ಬರ್ಗ್​​ ಅಧ್ಯಯನದ ಬಗ್ಗೆ ತಿಳಿದಿದೆ. ಆದರೆ, ಕೇಂದ್ರಿಕೃತ ವಿಚಾರಗಳು ಇವುಗಳನ್ನು ವ್ಯಾಖ್ಯಾನಿಸುವುದಿಲ್ಲ, ನನ್ನ ಕುಟುಂಬ ಹಾಗೂ ತಂಡದೊಂದಿಗೆ ಕಳೆದ ವರ್ಷಾಂತ್ಯದಲ್ಲಿಯೇ ಈ ಕುರಿತು ನಾನು ಚರ್ಚಿಸಿದ್ದೆ. ನಾನು ಯೋಚಿಸಿರುವ ಕೆಲವು ವಿಚಾರಗಳು ಒಂದು ಹಂತಕ್ಕೆ ಬಂದ ಮೇಲೆ ಇದನ್ನು ಮುಚ್ಚುವುದಕ್ಕೆ ನಿರ್ಧರಿಸಿದ್ದೆ. ಅಂತಿಮ ವಿಚಾರಗಳು ಪೂರ್ಣಗೊಂಡಿದ್ದು, ನಿಯಾಮವಳಿಗಳಂತೆ ಇಂದು ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರು ಮುಂದೆ ತಮ್ಮಿಷ್ಟದಂತೆ ಎಲ್ಲಿರಬೇಕು ಎಂದು ನಿರ್ಧರಿಸುತ್ತಾರೆಯೋ ಅದಕ್ಕೆ ಸಹಕಾರ ನೀಡಿ ಗಮನ ಹರಿಸಲಾಗುವುದು. ಕೆಲವರು ತಮ್ಮದೇ ಸ್ವಂತ ಸಂಶೋಧನಾ ಘಟನೆ ಸ್ಥಾಪಿಸಬೇಕು ಎಂದಿದ್ದಾರೆ. ಇದರಲ್ಲಿ ನಾನು ವೈಯಕ್ತಿಕವಾಗಿ ತೊಡಗಿಕೊಳ್ಳದಿದ್ದರೂ ದೃಢವಾಗಿ ಮತ್ತು ಸಾರ್ವಜನಿಕವಾಗಿ ಅವರಿಗೆ ಪ್ರೋತ್ಸಾಹ ನೀಡುತ್ತೇನೆ. ಮತ್ತೆ ಕೆಲವರು ಸ್ವತಂತ್ರ ಏಜೆಂಟ್​ ಆಗಿ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ. ಅವರು ಅಗತ್ಯವಿದ್ದಲ್ಲಿ ಮುಕ್ತವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.



Join Whatsapp