SDPI ಹಾಸನ ಜಿಲ್ಲಾ ನೂತನ ಅಧ್ಯಕ್ಷರಾಗಿ ಇಮ್ರಾನ್ ಅರೇಹಳ್ಳಿ ಆಯ್ಕೆ

Prasthutha|

ಅರೇಹಳ್ಳಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಸನ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಇಮ್ರಾನ್ ಅರೇಹಳ್ಳಿ ರವರು ಆಯ್ಕೆಯಾದರು. ಜಿಲ್ಲಾ ಉಪಾಧ್ಯಕ್ಷರಾಗಿ ಸಿದ್ದೀಕ್ ಆನೆಮಹಲ್ ಮತ್ತು ಸೆಯ್ಯದ್ ಪರೀದ್ ಆಯ್ಕೆಯಾದರು,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಸೆಯ್ಯದ್ ಇರ್ಪಾನ್ ಮತ್ತು ನದೀಂ ಆಯ್ಕೆಯಾದರು,ಜಿಲ್ಲಾ ಕಾರ್ಯದರ್ಶಿಯಾಗಿ  ಸಾಹಿರಾ ಬಾನು ಮತ್ತು ಮುಜೀಬುರ್ರಹಮಾನ್ ಬೇಲೂರು ಮತ್ತು ಕೋಶಾಧಿಕಾರಿಯಾಗಿ ತಬ್ರೇಜ್ ಅಹಮದ್ ರವರು ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಶಂಶುದ್ದಿನ್ ಕಾಡ್ಲೂರು, ಹೈದರ್ ಆನೆಮಹಲ್, ಶಜೀಲ್ ಅಹಮದ್ ವಸೀಂ ಅಹಮದ್ ಮತ್ತು ಕಾಸಿಂ ಆಯ್ಕೆಯಾದರು.

- Advertisement -

ಬೇಲೂರು  ತಾಲ್ಲೂಕಿನ ಅರೇಹಳ್ಳಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ  ನಡೆದ ಹಾಸನ ಜಿಲ್ಲಾ ಪ್ರತಿನಿಧಿ ಸಭೆಯನ್ನು, ಎಸ್ಡಿಪಿಐ ನ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯನವರು ಉದ್ಘಾಟಿಸಿದರು. ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿಂದು ಪ್ರಬಲವಾಗಿರುವ ಎರಡು ರಾಜಕೀಯ ಪಕ್ಷಗಳೆಂದರೆ ಬಿಜೆಪಿ ಮತ್ತು ಕಾಂಗ್ರೆಸ್,   

 ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ನಡೆಸಿದ ಮೈತ್ರಿಯಿಂದಾಗಿ ತನ್ನ ಅಸ್ತಿತ್ವವನ್ನೇ ನಿಧಾನವಾಗಿ ಕಳೆದುಕೊಳ್ಳುತ್ತಾ ಬರುತ್ತಿದೆ. ಮತ್ತು ಎಸ್ಡಿಪಿಐ ಮೂರನೇ ಸ್ಥಾನವನ್ನು ತುಂಬಲು  ಸಮರ್ಥವಾಗಿದ್ದು ಎಸ್ಡಿಪಿಐ ಯು ಸಂವಿಧಾನದ ಆದರ್ಶ ಸಮಾಜದ ಕಟ್ಟೆ ಕಡೆಯ ವ್ಯಕ್ತಿಯೊಂದಿಗೆ ಜೋಡಿಸಲು ಬಯಸುತ್ತದೆ ಎಂದರು. 

- Advertisement -

ಈ ಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಿದ್ದು ಕೆಳಕೊಂಡಂತೆ ಇವೆ.

1)ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಧಾರ್ಮಿಕ ಅಲ್ಪಸಂಖ್ಯಾತರ ಪ್ರಾರ್ಥನಾಲಯಗಳ ಮೇಲೆ ಕೊಮು ವಿದ್ವಂಸಕ ಶಕ್ತಿಗಳು ನಡೆಸಿದ ದಾಳಿಯನ್ನು ತಡೆಯಲು ಜಿಲ್ಲಾಡಳಿತ ವಿಪಲವಾಗಿದ್ದು, ಸರಕಾರವು ಮಧ್ಯ ಪ್ರವೇಶಿಸಿ ಈ ದಾಳಿಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಈ ಪ್ರತಿನಿಧಿ ಸಭೆಯು ನಿರ್ಣಯ ಕೈಗೊಂಡಿತು

2.ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ  ಸರ್ಕಾರ ಕಾಡಾನೆ ಕಾರಿಡಾರ್ ನಿರ್ಮಿಸಲು ಮೀನಮೇಷ ಎಣಿಸುತ್ತಿದ್ದು, ಇದರಿಂದ ಕಾಡಾನೆಗಳು ನಾಡಿನೊಳಗೆ ಪ್ರವೇಶಿಸಿ ನಿರಂತರ ದಾಳಿ ನಡೆಸುತ್ತಿದ್ದು ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಸರ್ಕಾರವು ಕಾಡಾನೆಗಳನ್ನು ಕಾಡಿನೊಳಗೆ ಸ್ವಚ್ಛಂದವಾಗಿ ಬದುಕುವ ಮತ್ತು ಜನರನ್ನು ನಾಡಿನೊಳಗೆ ನಿರ್ಭಿತಿ ಆಗಿ ಬದುಕಲು ಈ ಸಭೆಯು ಆಗ್ರಹಿಸಿತು

3) ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಮೀಸಲಿರಿಸಿದ ಅನುದಾನಗಳು ಮತ್ತು ಕಾರ್ಯಕ್ರಮಗಳನ್ನು ಪ್ರಚಾರಪಡಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳ ನಾಯಕರು ಧಾರ್ಮಿಕ ಕ್ಷೇತ್ರದ ಪ್ರತಿನಿಧಿಗಳು ಅಲ್ಪಸಂಖ್ಯಾತ ಸಮುದಾಯದ ರಾಜಕೀಯ ನಾಯಕರ ಸಭೆಯನ್ನು ಕರೆದು ಮಾಹಿತಿ ನೀಡಬೇಕು ಮತ್ತು ಜಿಲ್ಲೆಯಲ್ಲಿ  ಧಾರ್ಮಿಕ ಅಲ್ಪಸಂಖ್ಯಾತ ಮಹಿಳೆಯರಿಗಾಗಿ ಪ್ರತ್ಯೇಕ ಮಹಿಳಾ ಕಾಲೇಜು ತೆರೆಯಬೇಕು  ಎಂದು ಈ ಸಭೆಯು ಒತ್ತಾಯಿಸಿತು

4) ಜಿಲ್ಲೆಯಲ್ಲಿ ತಲೆಯೆತ್ತಿರುವ ಅಕ್ರಮ ರೆಸಾರ್ಟ್ಗಳು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು ಮಲೆನಾಡಿನ ಸೌಂದರ್ಯ ಮತ್ತು ಸಂಪತ್ತಿಗೆ ಧಕ್ಕೆಯಾಗಿದ್ದು ಸರ್ಕಾರ ತಕ್ಷಣವೇ ರೆಸಾರ್ಟ್ಗಳ ದಾಖಲೆಗಳನ್ನು ಪರಿಶೀಲಿಸಿ ಅನಧಿಕೃತ ರೆಸಾರ್ಟ್ ಮತ್ತು ಹೋಂಸ್ಟೇಗಳಿಗೆ ಕಡಿವಾಣ ಹಾಕಬೇಕೆಂದು ಈ ಸಭೆಯು ಒತ್ತಾಯಿಸಿತು

5) ಜಿಲ್ಲೆಯಲ್ಲಿ ವ್ಯಾಪಕಗೊಂಡ ಮಾದಕ ವ್ಯಸನಗಳನ್ನು ನಿಯಂತ್ರಿಸಲು ಮತ್ತು ಮಾದಕ ವಸ್ತುಗಳ ಮಾರಾಟಜಾಲವನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದ್ದು ಸರ್ಕಾರ ಮಧ್ಯ ಪ್ರವೇಶಿಸಿ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಾ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಪ್ರತಿನಿಧಿ ಸಭೆ ನಿರ್ಣಯಕೈಗೊಂಡಿತು.

ಜಿಲ್ಲಾಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಕಾರ್ಯದರ್ಶಿಗಳಾದ ಅಕ್ರಮ್ ಮೌಲಾನಾ ಮತ್ತು ಆಫ್ಸರ್ ಕೆ. ಆರ್. ನಗರ ನಡೆಸಿ ಕೊಟ್ಟರು.



Join Whatsapp