ದೆಹಲಿ ಚುನಾವಣೆ | ಬಿಜೆಪಿ ಸೋಲಿಸಲು ಎಎಪಿಗೆ ಬೆಂಬಲ: ಎಸ್‌ ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌

Prasthutha|

ಹರಿದ್ವಾರ: ಬಿಜೆಪಿಯನ್ನು ಮಣಿಸಲಿಕ್ಕಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯವಾಗಿ ಪ್ರಬಲವಾಗಿರುವ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಬೆಂಬಲ ನೀಡುತ್ತೇವೆ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಬುಧವಾರ ಇಲ್ಲಿ ಹೇಳಿದರು.

- Advertisement -

‘‘ಇಂಡಿಯಾ’ ಒಕ್ಕೂಟ ಅಖಂಡವಾಗಿದೆ’ ಎಂದು ಪ್ರತಿಪಾದಿಸಿದ ಎಸ್‌ಪಿ ವರಿಷ್ಠ, ‘ದೆಹಲಿಯಲ್ಲಿ ಕಾಂಗ್ರೆಸ್‌ಗಿಂತ ಎಎಪಿ ಪ್ರಬಲವಾಗಿದೆ’ ಎಂದರು.

ಬಿಜೆಪಿ ವಿರುದ್ಧ ಹೋರಾಡುವ ಸಾಮರ್ಥ್ಯವಿದ್ದರೂ, ಆ ನೆಲದಲ್ಲಿ ಯಾವ ಪ್ರಾದೇಶಿಕ ಪಕ್ಷ ಪ್ರಬಲವಾಗಿರುತ್ತದೆ ಅದರ ಕೈ ಬಲಪಡಿಸುವುದೇ ಪ್ರತಿಪಕ್ಷಗಳ ಮೈತ್ರಿಕೂಟ ರಚನೆಯ ಹಿಂದಿನ ಮೂಲ ತತ್ವವಾಗಿದೆ. ಇದಕ್ಕೆ ಬದ್ಧವಾಗಿ ಎಎಪಿ ಬೆಂಬಲಿಸಲಾಗುತ್ತಿದೆ’ ಎಂದು ಯಾದವ್‌ ಪತ್ರಕರ್ತರಿಗೆ ತಿಳಿಸಿದರು.



Join Whatsapp