ಸಿದ್ದರಾಮಯ್ಯ ಇವಾಗಲೂ ಸಿಎಂ, ಮುಂದೆಯೂ ಸಿಎಂ: ಸಚಿವ ಹೆಚ್.ಸಿ. ಮಹದೇವಪ್ಪ

Prasthutha|

ಮೈಸೂರು: ‘ನಮ್ಮ ಸರ್ಕಾರ ಐದು ವರ್ಷವೂ ಗಟ್ಟಿಯಾಗಿರುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ; ಮುಂದೆಯೂ ಕುಳಿತಿರುತ್ತಾರೆ. ಕುರ್ಚಿ ಅಲುಗಾಡುತ್ತಿದೆ, ಖಾಲಿಯಾಗುತ್ತದೆ ಎಂಬ ಯಾವ ಚರ್ಚೆಯೂ ಬೇಡ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

- Advertisement -

ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಕುರ್ಚಿಗಾಗಿ ರೇಸೇ ನಡೆಯುತ್ತಿಲ್ಲ. ಓಟವೇ ಇಲ್ಲ ಎಂದ ಮೇಲೆ ಆಕಾಂಕ್ಷಿಗಳ ಪ್ರಶ್ನೆಯೇ ಬರುವುದಿಲ್ಲ. ರೇಸ್ ಮುಗಿದಿದೆ; ನಾವು ಗುರಿ ತಲುಪಿದ್ದೇವೆ. ಸರ್ಕಾರ ನಡೆಸುತ್ತಿದ್ದೇವೆ. 2028ಕ್ಕೂ ನಮ್ಮದೇ ಸರ್ಕಾರ ಬರುತ್ತದೆ. ಆಗ ಬೇಕಾದರೆ ರೇಸ್‌ ಬಗ್ಗೆ ಮಾತನಾಡೋಣ. ಸದ್ಯಕ್ಕೆ ಅದ್ಯಾವ ಪ್ರಶ್ನೆಗಳೂ ಇಲ್ಲ’ ಎಂದರು.

‘ವಿರೋಧಪಕ್ಷದವರಿಗೆ ಸಂವಿಧಾನದ ಪ್ರಕಾರ ಕೆಲಸ ಮಾಡಲು ಯಾವ ವಿಚಾರವೂ ಇಲ್ಲ. ಈ ಕಾರಣ ಇಲ್ಲದ ವಿಚಾರವನ್ನು ಇದೆ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ವಿರೋಧ‍ಪಕ್ಷವಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ಸೋತಿವೆ ಅಥವಾ ಆ ಸ್ಥಾನಕ್ಕೆ ಬೇಕಾದ ಪಕ್ವತೆ ಬರುತ್ತಿಲ್ಲವಷ್ಟೆ’ ಎಂದು ಟೀಕಿಸಿದರು.



Join Whatsapp