ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಸಂಸ್ಥೆ ಆಯೋಜಿಸಿರುವ 5ನೇ ವರ್ಷದ ಕ್ರಿಕೆಟ್ ಕಾರ್ನಿವಲ್ ಜನವರಿ 18 ಮತ್ತು 19ರಂದು ನಗರದ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಮೈದಾನದಲ್ಲಿ ನಡೆಯಲಿದೆ.
ಪಂದ್ಯಾಕೂಟದ ಟ್ರೋಫಿ ಮತ್ತು ಜೆರ್ಸಿ ಅನಾವರಣ ಕಾರ್ಯಕ್ರಮ ಮಂಗಳವಾರ ಸಂಜೆ ನಗರದ ಫಿಝಾ ನೆಕ್ಸಸ್ ಮಾಲ್ ಆವರಣದಲ್ಲಿ ನೆರವೇರಿತು. ನಗರ ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಟ್ರೋಫಿ ಅನಾವರಣಗೊಳಿಸಿದರು.
ಇದೇ ವೇಳೆ ಕ್ರಿಕೆಟ್ ಕಾರ್ನಿವಲ್ ನಲ್ಲಿ ಭಾಗಿಯಾಗಲಿರುವ ನಾಲ್ಕು ತಂಡಗಳ ಜೆರ್ಸಿಗಳನ್ನು ಬಿಡುಗಡೆಗೊಳಿಸಲಾಯಿತು,. ಫಿಝಾ ನೆಕ್ಸಸ್ ಮಾಲ್ ಕೇಂದ್ರ ನಿರ್ದೇಶಕ ಅರವಿಂದ್ ಶ್ರೀವಾಸ್ತವ್ ಮತ್ತು ಪಂದ್ಯಾಕೂಟದ ಪ್ರಯೋಜಕರಾದ ಸೌದಿ ಅರೇಬಿಯಾದ ಜಾಕ್ ಕಂಪೆನಿ ಪಾಲುದಾರ ರವೂಫ್ ಕೃಷ್ಣಾಪುರ ಜೆರ್ಸಿ ಬಿಡುಗಡೆ ಮಾಡಿದರು. ನಾಲ್ಕು ತಂಡದ ಆಟಗಾರರು ಜೆರ್ಸಿ ತೊಟ್ಟು
ರ್ಯಾಪ್ ವಾಕ್ ನಡೆಸಿದರು.
ಕಾರ್ಯಕ್ರಮದಲ್ಲಿ ಕೋಸ್ಟಲ್ ಫ್ರೆಂಡ್ಸ್ ಅಧ್ಯಕ್ಷ ಷರೀಫ್ ಅಬ್ಬಾಸ್ ವಳಾಲು, ಜಾಕ್ ಕ್ರಿಕೆಟ್ ಕಾರ್ನಿವಲ್ ಸಂಚಾಲಕರಾದ ರಿಯಾಝ್ ಶೈನ್ ಮತ್ತು ಸಫ್ವಾನ್ ಖಾನ್, ತಂಡದ ಮಾಲಕರಾದ ರಿಯಾಝ್ ಕಣ್ಣೂರು, ಸಲಾಂ ಸಮ್ಮಿ, ದಾವೂದ್ ಎಕ್ಸ್’ಟೆನ್ ಮತ್ತು ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗಿಯಾಗಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಹಜ್ಜಾಜ್ ಸ್ವಾಗತಿಸಿದರು. ಟ್ರಸ್ಟಿ ಮುನ್ನ ಕಮ್ಮರಡಿ ಮತ್ತು ಬ್ಯಾರಿ ಝುಲ್ಫಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಿರಾಜ್ ಎರ್ಮಾಳ್ ಧನ್ಯವಾದ ಸಮರ್ಪಿಸಿದರು.