ಮೈಸೂರು | ಕೇಕ್ ತಯಾರಿಸಲು ತಂದಿದ್ದ essence ಕುಡಿದು ಇಬ್ಬರು ಖೈದಿಗಳ ಸಾವು

Prasthutha|

ಮೈಸೂರು: ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್​ ಕುಡಿದು ಇಬ್ಬರು ಖೈದಿಗಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದ್ದು. ಮತ್ತೋರ್ವ ಖೈದಿ ತೀವ್ರ ಅಸ್ವಸ್ಥನಾಗಿದ್ದಾನೆ.

- Advertisement -

ಮೃತರಾದ ಮೈಸೂರಿನ ಮಾದೇಶ್ ಮತ್ತು ಚಾಮರಾಜನಗರದ ನಾಗರಾಜ್ ಅವರು ಹೊಸ ವರ್ಷದ ಮುನ್ನಾದಿನದಂದು ಎಸೆನ್ಸ್ ಸೇವಿಸಿ ಅಸ್ವಸ್ಥರಾಗಿದ್ದರು. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಕೆಆರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇವರು ಜೈಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ವರ್ಷದ ಹಿನ್ನಲೆ ಕೇಕ್ ತಯಾರಿಸಲು ಸಾಮಾಗ್ರಿಗಳನ್ನು ತಂದಿರಸಲಾಗಿತ್ತು. ಇದರಲ್ಲಿ ಕೇಕ್​ ಗೆ ಬಳಸುವ ಎಸೆನ್ಸ್​ ತರಲಾಗಿತ್ತು. ಆದರೆ ಈ ಮೂವರು ಕಿಕ್​ ಗಾಗಿ ಯಾರಿಗೂ ಹೇಳದೆ ಈ ಎಸೆನ್ಸ್ ಕುಡಿದಿದ್ದರು. ಈ ಘಟನೆ ಸಂಬಂಧ ಮಂಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.



Join Whatsapp