ಮೆಲ್ಬರ್ನ್: ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಸ್ಥಾನದಲ್ಲಿ ಮುಂಬೈ ಆಫ್ ಸ್ಪಿನ್ನರ್ ತನುಷ್ ಕೋಟ್ಯಾನ್ ಅವರು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
26 ವರ್ಷ ಪ್ರಾಯದ ತನುಷ್ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದಲ್ಲಿದ್ದರು. ವಾಷಿಂಗ್ಟನ್ ಸುಂದರ್ ಅವರಿಗೆ ಬ್ಯಾಕಪ್ ಆಗಿ ತನುಷ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
‘ಮುಂಜಾಗ್ರತಾ ಕ್ರಮವಾಗಿ ಕೋಟ್ಯಾನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ವಾಷಿ (ವಾಷಿಂಗ್ಟನ್ ಸುಂದರ್) ಅಥವಾ ಜಡ್ಡು (ರವೀಂದ್ರ ಜಡೇಜ) ಗಾಯಾಳಾದಲ್ಲಿ ಮಾತ್ರ ಅವರು ಅವಕಾಶ ಪಡೆಯಲಿದ್ದಾರೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸೋಮವಾರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಎರಡು ವಿಕೆಟ್ಗಳ ಜೊತೆ ಅಜೇಯ 39 ರನ್ ಬಾರಿಸಿದ್ದರು.
33 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 101 ವಿಕೆಟ್ ಮತ್ತು 1525 ರನ್ ಗಳಿಸಿದ್ದಾರೆ. ಎರಡು ಶತಕಗಳು ಇದರಲ್ಲಿ ಸೇರಿವೆ.
ತನುಷ್ ಕೋಟ್ಯಾನ್ ಉಡುಪಿ ಮೂಲದವರಾಗಿದ್ದರೂ, ಅವರು ಬೆಳೆದಿದ್ದು ಮುಂಬೈನಲ್ಲಿ. ಹೀಗಾಗಿಯೇ ಮುಂಬೈನಲ್ಲೇ ಕ್ರಿಕೆಟ್ ಕೆರಿಯರ್ ಕೂಡ ಶುರುವಾಯಿತು.
ಟೀಮ್ ಇಂಡಿಯಾಗೆ ಆಯ್ಕೆಯಾದ ತುಳುನಾಡಿನ ತನುಷ್ ಕೋಟ್ಯಾನ್
Prasthutha|