ಅಕ್ಟೋಬರ್​ ನಲ್ಲಿ 6,000 ಕೋಟಿ ರೂ.ಗೂ ಅಧಿಕ ಟೋಲ್ ಸಂಗ್ರಹ

Prasthutha|

ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಭಾರತದ ಹೆದ್ದಾರಿಗಳಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ನಿರೀಕ್ಷೆ ಮೀರಿಸುವಷ್ಟು ಆಗಿದೆ.

- Advertisement -

ಇತ್ತೀಚೆಗೆ ಬಿಡುಗಡೆಯಾದ ದತ್ತಾಂಶದ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಟೋಲ್ ಸಂಗ್ರಹ 6,114.92 ಕೋಟಿ ರೂ ಆಗಿದೆ. ಟೋಲ್ ಸಂಗ್ರಹದ ಮಾಹಿತಿ ಪಡೆಯಲು ಆರಂಭಿಸಿದಾಗಿನಿಂದ (2021ರಿಂದ) ಯಾವುದೇ ತಿಂಗಳಲ್ಲೂ ಇಷ್ಟು ಟೋಲ್ ಕಲೆಕ್ಷನ್ ಆಗಿರಲಿಲ್ಲ. ಇದೇ ಗರಿಷ್ಠ ಎನ್ನವ ದಾಖಲೆ ಮಾಡಿದೆ.

ಹಿಂದಿನ ಆರು ತಿಂಗಳ ಸರಾಸರಿ ತೆಗೆದುಕೊಂಡರೆ, ಅಂದರೆ ಏಪ್ರಿಲ್ ​ನಿಂದ ಸೆಪ್ಟೆಂಬರ್​ ವರೆಗಿನ ಅವಧಿಯಲ್ಲಿ ತಿಂಗಳಿಗೆ ಸರಾಸರಿಯಾಗಿ 5,681.46 ಕೋಟಿ ರೂನಷ್ಟು ಇ-ಟೋಲ್ ಸಂಗ್ರಹ ಆಗಿರುವುದು ಕಂಡು ಬಂದಿದೆ. ಅಕ್ಟೋಬರ್ ತಿಂಗಳಲ್ಲಿ ಟೋಲ್ ಕಲೆಕ್ಷನ್ ಹೆಚ್ಚಾಗಿರುವುದು ತೀರಾ ಅನಿರೀಕ್ಷಿತವಲ್ಲ. ಆ ತಿಂಗಳು ಹಬ್ಬದ ಸೀಸನ್ ಇದ್ದರಿಂದ ಜನರು ತಮ್ಮ ಊರಿಗೆ ಹೋಗಿ ಬರುವುದು ಸೇರಿದಂತೆ ವಾಹನ ಸಂಚಾರ ಸಹಜವಾಗಿ ಹೆಚ್ಚಾಗಿರಬಹುದು ಎಂದು ತಿಳಿದು ಬಂದಿದೆ.

- Advertisement -

ಕ್ರಿಸಿಲ್ ಮಾರ್ಕೆಟಿಂಗ್ ಇಂಟೆಲಿಜೆನ್ಸ್ ಅಂಡ್ ಅನಾಲಟಿಕ್ಸ್ ಸಂಸ್ಥೆಯ ಕನ್ಸಲ್ಟಿಂಗ್ ಮುಖ್ಯಸ್ಥರಾದ ಜಗನ್ನಾರಾಯಣ್ ಪದ್ಮನಾಭನ್ ಪ್ರಕಾರ ಅಕ್ಟೋಬರ್​ನಲ್ಲಿ ಟೋಲ್ ಸಂಗ್ರಹ ಹೆಚ್ಚಾಗಲು ಸರಕು ಸಾಗಣೆಯಲ್ಲಿ ಆದ ಹೆಚ್ಚಳ, ಹಾಗೂ ಇಕಾಮರ್ಸ್ ವ್ಯವಹಾರದಲ್ಲಿ ಆದ ಹೆಚ್ಚಳವು ಕಾರಣಗಳಂತೆ.

‘ತಿಂಗಳ ಆರಂಭದಲ್ಲಿ ರೀಟೇಲ್ ಮಳಿಗೆಗಳಿಗೆ ಸರಕುಗಳ ಸಾಗಣೆಯಲ್ಲಿ ಬಹಳ ಹೆಚ್ಚಳವಾಗಿದೆ. ಇಡೀ ತಿಂಗಳು ಇಕಾಮರ್ಸ್ ಡೆಲಿವರಿಗಳ ಪ್ರಮಾಣ ಉಚ್ಚ ಮಟ್ಟದಲ್ಲಿತ್ತು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರಂತರವಾಗಿ ಇತ್ತು. ಇದು ಟೋಲ್ ಸಂಗ್ರಹ ಹೆಚ್ಚಲು ಒಂದು ಕಾರಣ’ ಎಂದು ಪದ್ಮನಾಭನ್ ಅಭಿಪ್ರಾಯಪಟ್ಟಿದ್ದಾರೆ.



Join Whatsapp