ಹೈದರಾಬಾದ್: ಖ್ಯಾತ ಗಾಯಕ ದಿಲ್ಜೀತ್ ದೊಸ್ಸಾಂಜ್ ಗೆ ತೆಲಂಗಾಣ ಸರ್ಕಾರ ನೊಟೀಸ್ ನೀಡಿದೆ.
ದಿಲ್ಜಿತ್ ದೊಸ್ಸಾಂಜ್, ‘ದಿಲ್ಲುಮಿನಾಟಿ’ ಹೆಸರಿ ಲೈವ್ ಕಾನ್ಸರ್ಟ್ ಟೂರ್ ಮಾಡುತ್ತಿದ್ದಾರೆ. ಭಾರತದ ಹಲವು ನಗರಗಳಲ್ಲಿ ತಮ್ಮ ಶೋ ನಡೆಸಿಕೊಡಲಿದ್ದಾರೆ. ಇದೀಗ ತೆಲಂಗಾಣದ ಹೈದರಾಬಾದ್ ನಲ್ಲಿ ದಿಲ್ಜಿತ್ ದೊಸ್ಸಾಂಗ್ ಶೋ ನಡೆಸಿಕೊಡಲಿದ್ದು, ಶೋಗೆ ಮುನ್ನ, ತೆಲಂಗಾಣ ಸರ್ಕಾರ ದಿಲ್ಜಿತ್ ಗೆ ನೊಟೀಸ್ ನೀಡಿದ್ದು, ಕೆಲವು ಹಾಡುಗಳನ್ನು ಹಾಡದಂತೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಹಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ.
ನವೆಂಬರ್ 15 ಅಂದರೆ ಇಂದು ರಾತ್ರಿ ದಿಲ್ಜೀತ್ ರ ಶೋ ಹೈದರಾಬಾದ್ ನಲ್ಲಿ ನಡೆಯಲಿದ್ದು, ಶೋಗೆ ಮುನ್ನ ಸರ್ಕಾರ ನೊಟೀಸ್ ನೀಡಿದ್ದು, ಡ್ರಗ್ಸ್, ಮದ್ಯ, ಹಿಂಸೆಯ ಕುರಿತಾದ ಹಾಡುಗಳನ್ನು ವೇದಿಕೆಯಲ್ಲಿ ಹಾಡುವಂತಿಲ್ಲ ಎಂದು ದಿಲ್ಜಿತ್ ದೊಸ್ಸಾಂಗ್ ಗೆ ತೆಲಂಗಾಣ ಸರ್ಕಾರ ಹೇಳಿದೆ. ಅಲ್ಲದೆ, ವೇದಿಕೆ ಮೇಲೆ ಮಕ್ಕಳನ್ನು ಕರೆತರುವಂತಿಲ್ಲ, ಇದು ಡಬ್ಲುಎಚ್ ಓ ನಿಯಮಕ್ಕೆ ವಿರುದ್ಧ ಆಗಿರಲಿದೆ ಎಂದು ಸಹ ಸರ್ಕಾರ ಎಚ್ಚರಿಕೆ ನೀಡಿದೆ.