ಹಾವೇರಿ: ಶಿಗ್ಗಾಂವಿ ಉಪಚುನಾವಣೆ ಮತದಾನ ಪೂರ್ಣಗೊಂಡ ಮರುದಿನವೇ ಹಾವೇರಿ ತಾಲ್ಲೂಕಿನ ಯತ್ನಳ್ಳಿ ಬಳಿಯಿರುವ ಕಾಲುವೆಯೊಂದರಲ್ಲಿ 10 ಬ್ಯಾಲೆಟ್ ಬಾಕ್ಸ್ಗಳು ಪತ್ತೆಯಾಗಿವೆ.
ಬ್ಯಾಲೆಟ್ ಬಾಕ್ಸ್ ಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿದರು.
ಬಳಿಕ ಹೇಳಿಕೆ ನೀಡಿದ ಅಧಿಕಾರಿಗಳು, ಈ ಬ್ಯಾಲೆಟ್ ಬಾಕ್ಸ್ಗಳು ಹಳೆಯದ್ದಾಗಿದ್ದು, ಶಿಗ್ಗಾಂವಿ ಚುನಾವಣೆಗೂ ಈ ಬಾಕ್ಸ್ಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಹಾವೇರಿಯ ಡಿಸಿ ವಿಜಯ ಮಹಾಂತೇಶ ದಾನಮ್ಮನವರ್ ಅವರು ಮಾತನಾಡಿ, ಈ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಕೋರಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.