ಹಿಂದೂಗಳ ಪರವಾಗಿರುವವರಿಗೆ ಮತ ಹಾಕಿ, ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಸ್ಥಿತಿ ಬರುತ್ತೆ: ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪ

Prasthutha|

ಶಿವಮೊಗ್ಗ: ಹಿಂದೂಗಳ ಪರವಾಗಿ ಇರುವವರಿಗೆ ಮತ ಹಾಕಿ ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಪರಿಸ್ಥಿತಿ ಬರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು, ದೇವಸ್ಥಾನ, ಸಾಧು ಸಂತರು, ಪುರಾತತ್ವ ಇಲಾಖೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಮಾಡಿಕೊಂಡಿದ್ದಾರೆ. ವಕ್ಫ್ ಆಸ್ತಿ ಆಗಲು ಬಿಡಲ್ಲ ಎಂದು ಒಬ್ಬ ಕಾಂಗ್ರೆಸ್ ನವರ ಬಾಯಲ್ಲಿ ಬರಲಿಲ್ಲ. ಹಿಂದೂಗಳ ಪರವಾಗಿ ಇರುವವರಿಗೆ ಮತ ಹಾಕಿ ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಪರಿಸ್ಥಿತಿ ಬರುತ್ತದೆ ಎಂದರು.


ವಕ್ಫ್ ನೋಟಿಸ್ ವಾಪಸ್ ತೆಗೆದುಗೊಂಡಿದ್ದೇವೆ ಎಂದು ಹೇಳುತ್ತಾರೆ ಆದರೆ ಸಿಎಂ, ಡಿಸಿಎಂ ಈ ಬಗ್ಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳುವುದಿಲ್ಲ. ವಿಪಕ್ಷಗಳು ರಾಜಕಾರಣ ಮಾಡುತ್ತೇವೆ ಎಂದು ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ಧರಿದ್ದರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾನೆ. ಆದರೆ ಈ ಬಗ್ಗೆ ಒಬ್ಬ ಕಾಂಗ್ರೆಸ್ ನಾಯಕನೂ ಖಂಡಿಸಲಿಲ್ಲ ಎಂದು ಕಿಡಿಕಾರಿದರು.

- Advertisement -


ಇದೇ ವೇಳೆ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಹಿಂದೂಸ್ಥಾನ ಏನು ಪಾಕಿಸ್ತಾನ ಮಾಡಲು ಹೊರಟ್ಟಿದ್ದೀರಾ? ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತಾರೆ. ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ ಎಂದು ಹೇಳಿದ್ದಾರೆ.



Join Whatsapp