ನೇಜಾರು ಕೊಲೆ ಪ್ರಕರಣಕ್ಕೆ ಒಂದು ವರ್ಷ: ಶೀಘ್ರ ಆರೋಪಿಗೆ ಶಿಕ್ಷೆಯಾಗಲಿ; ಕುಟುಂಬದ ಆಗ್ರಹ

Prasthutha|

- Advertisement -

ಉಡುಪಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ವರ್ಷ ತುಂಬಿದ್ದು, ಸಾಕ್ಷಿಗಳ ವಿಚಾರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

2023 ನವೆಂಬರ್ 12 ರಂದು ಉಡುಪಿಯ ನೇಜಾರಿನ ತೃಪ್ತಿ ಲೇಔಟ್ ನಲ್ಲಿ ನಡೆದ ತಾಯಿ ಮತ್ತು ಮೂವರು‌ ಮಕ್ಕಳ ಕೊಲೆ ಪ್ರಕರಣ ನಡೆದು ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಪ್ರಕರಣದ ವಿಚಾರಣೆ ಉಡುಪಿಯ ವಿಚಾರಣಾ ನ್ಯಾಯಾಲಯದಲ್ಲಿ ಮುಂದುವರಿದಿದೆ. ಆರೋಪಿ ಪ್ರವೀಣ್ ಚೌಗಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದೇನೆ.

- Advertisement -

ಪತ್ನಿ- ಮೂವರು ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬ ಇನ್ನೂ ಆ ಶಾಕ್‌ನಿಂದ ಅ ಹೊರಬಂದಿಲ್ಲ. ನಿತ್ಯವೂ ಈ ಕಹಿ ಘಟನೆಯ ನೆನಪು ಬೆಂಬಿಡದೇ ಕಾಡುತ್ತಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗುವುದನ್ನು ಎದುರು ನೋಡುತ್ತಿದೆ.

ಆದಷ್ಟು ಶೀಘ್ರ ವಿಚಾರಣೆ ಮುಕ್ತಾಯಗೊಂಡು ಆರೋಪಿಗೆ ಶಿಕ್ಷೆಯಾಗಲಿ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ದುಷ್ಕರ್ಮಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಕ್ರ್ಯೂ ಪ್ರವೀಣ್ ಅರುಣ್ ಚೌಗುಲೆ ಪ್ರಕರಣದಿಂದ ಪಾರಾಗುವುದಕ್ಕೆ ಪ್ರಯತ್ನಿಸುತ್ತಿದ್ದಾನೆ.

ಪ್ರಕರಣದ ತನಿಖೆಯನ್ನು ಅನಗತ್ಯವಾಗಿ ವಿಳಂಬ ಮಾಡುವ ಸಲುವಾಗಿ ಹಂತಕ ಪ್ರವೀಣ್ ಅರುಣ್ ಚೌಗುಲೆ ಜೈಲಿನಲ್ಲಿ ಇದ್ದುಕೊಂಡೇ ನಾನಾ ಪ್ಯಾನ್‌ಗಳನ್ನು ರೂಪಿಸುತ್ತಿದ್ದಾನೆ. ಜೀವ ಬೆದರಿಕೆ ಕಾರಣ ಕೊಟ್ಟು ಸಾಕ್ಷಿಗಳ ವಿಚಾರಣೆಯನ್ನೇ ಆರು ತಿಂಗಳ ಕಾಲ ಮುಂದೂಡಿ ಪ್ರಕರಣದ ಬಿಸಿ ತಣಿಸುವುದಕ್ಕೆ ಮುಂದಾಗಿದ್ದಾನೆ.

ಕೊಲೆ ಪ್ರಕರಣ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಜಾತಿ ಮತ ಧರ್ಮದ ಎಲ್ಲೇ ಮೀರಿ ಈ ಕೃತ್ಯವನ್ನು ಖಂಡಿಸಿದ್ದರು. ಸಂತ್ರಸ್ಥರಿಗಾಗಿ ನಾಗರಿಕರು ಮಿಡಿದಿದ್ದರು. ದೀಪಾವಳಿಯದ್ದೇ ಆ ದಿನ ಈ ಕೃತ್ಯ ನಡೆದ ಕಾರಣ ಸ್ಥಳೀಯರು ಅಂದು ದೀಪಾವಳಿಯನ್ನು ಕೂಡ ಅತ್ಯಂತ ಸರಳವಾಗಿ ಆಚರಿಸಿ ಸಂತ್ರಸ್ಥ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದರು.



Join Whatsapp