ಕೀವ್ (ಉಕ್ರೇನ್): ರಷ್ಯಾ ನಡೆಸುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಮತ್ತು ಭವಿಷ್ಯದಲ್ಲಿ ಇಂತಹ ಸಂಘರ್ಷ ಏರ್ಪಡದಂತೆ ನೋಡಿಕೊಳ್ಳಲು ಸಾಮರ್ಥ್ಯ ಹಾಗೂ ರಾಜತಾಂತ್ರಿಕತೆಯು ಒಟ್ಟಾಗಿ ಕೆಲಸ ಮಾಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ವಿಡಿಯೊ ಭಾಷಣದದಲ್ಲಿ ಅವರು, ‘ಸಾಮರ್ಥ್ಯವಿಲ್ಲದ ರಾಜತಾಂತ್ರಿಕತೆಯಿಂದ ಏನನ್ನೂ ನಿರೀಕ್ಷಿಸಲಾಗದು ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.
‘ರಾಜತಾಂತ್ರಿಕ ಗುರಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳದಿದ್ದರೆ, ಶಸ್ತ್ರಾಸ್ತ್ರಗಳು ಕೆಲಸಕ್ಕೆ ಬರುವುದಿಲ್ಲ. ಹಾಗಾಗಿಯೇ, ಸಾಮರ್ಥ್ಯ ಮತ್ತು ರಾಜತಾಂತ್ರಕತೆಯು ಒಂದು ಕೈಯಲ್ಲಿ (ಒಟ್ಟಾಗಿ) ಕಾರ್ಯನಿರ್ವಹಿಸಬೇಕು’ ಎಂದಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಹಾಗೂ ದೀರ್ಘಾವಧಿಗೆ ಶಾಂತಿ ನೆಲೆಸುವಂತೆ ಮಾಡಲು ಇರುವ ಏಕೈಕ ಮಾತ್ರ ಇದಾಗಿದೆ ಎಂದು ಪ್ರತಿಪಾದಿಸಿದ್ದಾರೆ.