ನಟ ಸಲ್ಮಾನ್ ಖಾನ್​ ರಕ್ಷಣೆಗೆ 70 ಜನರ ನೇಮಕ: 4 ಹಂತಗಳಲ್ಲಿ ಭದ್ರತೆ

Prasthutha|

- Advertisement -

ಮುಂಬೈ: ಕೆಲವು ದಿನಗಳ ಹಿಂದೆ ನಟ ಸಲ್ಮಾನ್ ಖಾನ್ ಅವರ ಆಪ್ತ ಬಾಬಾ ಸಿದ್ಧಿಕಿ ಹತ್ಯೆ ಆಯಿತು. ಆ ಬಳಿಕ ಸಲ್ಮಾನ್ ಖಾನ್ ಅವರಿಗೂ ಕೊಲೆ ಬೆದರಿಕೆ ಹಾಕಲಾಯಿತು. ಈ ಕಾರಣದಿಂದ ಸಲ್ಮಾನ್ ಖಾನ್ ಅವರ ಆಪ್ತರಿಗೆ, ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ.

ಹಾಗಾಗಿ ಅವರ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ವರದಿಗಳ ಪ್ರಕಾರ, ಒಟ್ಟು 70 ಜನರು ಸಲ್ಮಾನ್ ಖಾನ್​ ಅವರ ರಕ್ಷಣೆಗೆ ನಿಂತಿದ್ದಾರೆ.

- Advertisement -

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರು ನಾಯಕಿ ಆಗಿದ್ದಾರೆ. ಖ್ಯಾತ ನಿರ್ದೇಶಕ ಮುರುಗದಾಸ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್​ ಹೇಳುತ್ತಿದ್ದಾರೆ. ಮುಂದಿನ ಹಂತದ ಚಿತ್ರೀಕರಣ ಹೈದರಾಬಾದ್​ನಲ್ಲಿ ನಡೆಯಲಿದೆ. ನಗರದಲ್ಲಿ 2 ಸೆಟ್​ ಹಾಕಲಾಗಿದೆ. ಇನ್ನುಳಿದ ಭಾಗದ ಚಿತ್ರೀಕರಣ ಖಾಸಗಿ ಹೋಟೆಲ್​ನಲ್ಲಿ ನಡೆಯಲಿದೆ. ಈ ಎಲ್ಲ ಜಾಗಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

ಖಾಸಗಿ ಹೋಟೆಲ್​ನ ಒಂದು ಭಾಗದಲ್ಲಿ ಮಾತ್ರ ಶೂಟಿಂಗ್ ನಡೆಯಲಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಇಡೀ ಹೋಟೆಲ್​ ಅನ್ನು ಸಲ್ಮಾನ್ ಖಾನ್ ಅವರ ಸೆಕ್ಯೂರಿಟಿ ಟೀಮ್​ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹೋಟೆಲ್​ಗೆ ಬರುವ ಎಲ್ಲರ ಗುರುತು ಮತ್ತು ಹಿನ್ನೆಲೆಯನ್ನು ಸೂಕ್ತವಾಗಿ ಪರಿಶೀಲಿಸಲಾಗುತ್ತದೆ. ಹೋಟೆಲ್​ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ನಂತರ ಎರಡನೇ ಹಂತದಲ್ಲಿ ಸಲ್ಮಾನ್ ಖಾನ್ ಅವರ ಖಾಸಗಿ ಭದ್ರತಾ ತಂಡ ಕೂಡ ತಪಾಸಣೆ ಮಾಡಲಿದೆ.

ಶೂಟಿಂಗ್​ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿದರೆ ‘ಸಿಕಂದರ್’ ಚಿತ್ರತಂಡಕ್ಕೆ ಕಪ್ಪು ಚುಕ್ಕಿ ಆಗಲಿದೆ. ಆ ಕಾರಣದಿಂದ ಚಿತ್ರತಂಡದವರು ಹೆಚ್ಚಿನ ಜಾಗ್ರತೆ ವಹಿಸುತ್ತಿದ್ದಾರೆ. ಎನ್​ಎಸ್​ಜಿ ಕಮಾಂಡೋಗಳು, ಪೊಲೀಸ್ ಅಧಿಕಾರಿಗಳು, ಖಾಸಗಿ ಸೆಕ್ಯೂರಿಟಿ ಸಿಬ್ಬಂದಿ ಸೇರಿದಂತೆ ಒಟ್ಟು 70 ಜನರು ಸಲ್ಮಾನ್ ಖಾನ್ ಅವರ ರಕ್ಷಣೆಗೆ ನಿಂತಿದ್ದಾರೆ. ಇನ್ನು, ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್​ ಶೇರ ಕೂಡ ಕೆಲವು ಅತ್ಯುತ್ತಮ ಬಾಡಿಗಾರ್ಡ್​ಗಳನ್ನು ಆಯ್ಕೆ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸುದ್ದಿ ಆಗಿದೆ.



Join Whatsapp