ಬಿಜೆಪಿ ನಾಟ್ಯ ಮಂಡಳಿಯಿಂದ ಸುಳ್ಳು ಪ್ರಚಾರ: ಸಚಿವ ಎಂ.ಬಿ. ಪಾಟೀಲ್ ಕಿಡಿ

Prasthutha|

ವಿಜಯಪುರ: ವಕ್ಫ್​ ವಿಚಾರದಲ್ಲಿ ಅಸತ್ಯವನ್ನು ಸತ್ಯ ಮಾಡುವ ಕೆಲಸ ನಡೆದಿದೆ. ಸುಳ್ಳು ಪ್ರಚಾರ ನಡೆದಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

- Advertisement -

“ಕಳೆದೊಂದು ವಾರದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಕ್ಫ್ ವಿಚಾರ ಸದ್ದು ಮಾಡಿದೆ. ಈಗಾಗಲೇ ಸ್ಪಷ್ಟವಾಗಿ ಹೇಳಿದಂತೆ ಒಂದೇ ಒಂದು ಇಂಚು ರೈತರು, ಧಾರ್ಮಿಕ ಸಂಸ್ಥೆಗಳ ಜಮೀನು ವಕ್ಫ್​ಗೆ ಹೋಗಲು ಬಿಡಲ್ಲ. ಸಿಎಂ ಸಿದ್ದರಾಮಯ್ಯ ಅವರು ಸಹ ಸ್ಪಷ್ಟವಾಗಿ ಹೇಳಿದ್ದಾರೆ. 12 ಸಾವಿರ ಎಕರೆ ಜಮೀನು ಇನಾಂ ಮತ್ತು ಭೂ ಸುಧಾರಣೆ ಕಾಯ್ದೆಯಡಿ ಹಂಚಿದ್ದು, ಅದನ್ನು ಯಾರೂ ಹಿಂಪಡೆಯಲ್ಲ ಎಂದು ಘಂಟಾಘೋಷವಾಗಿ ಹೇಳಲಾಗಿದೆ. ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಹ ಅಧಿಕಾರಿಗಳಿಗೆ ಸೂಚನೆ ನೀಡಿ ನೊಟೀಸ್ ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ. ಇಷ್ಟೆಲ್ಲ ಸತ್ಯ ಹೇಳಿದರೂ ಅನವಶ್ಯಕವಾಗಿ ಗೊಂದಲ ಸೃಷ್ಠಿಸಲಾಗುತ್ತಿದೆ” ಎಂದರು.

“ಬಿಜೆಪಿಯ ನಾಟ್ಯ ಮಂಡಳಿ ಆಂತರಿಕ ಯಡಿಯೂರಪ್ಪ ವರ್ಸೆಸ್ ಅದರ್ಸ್ ತಿಕ್ಕಾಟವನ್ನು ವಕ್ಫ್ ಕಡೆ ಒಯ್ಯಲಾಗಿದೆ. ವಿಜಯೇಂದ್ರ, ಅಶೋಕ ಟೀಮ್ ಬಂದಿಲ್ಲ. ಧಾರ್ಮಿಕ ಮುಖಂಡರಿಗೆ ಈ ವಿಚಾರ ಗೊತ್ತಿಲ್ಲ. ಕನ್ಹೇರಿ ಸ್ವಾಮೀಜಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಮೋದಿ ಸೇರಿದಂತೆ 2011ರಿಂದ ನಡೆದ ವಿದ್ಯಮಾನ ಶ್ರೀಗಳ ಗಮನಕ್ಕೆ ತಂದರೆ ಅವರ ವಿರುದ್ಧ ಶ್ರೀಗಳೇ ತಿರುಗಿ ಬಳಲಿದ್ದಾರೆ” ಎಂದು ವ್ಯಂಗ್ಯವಾಡಿದರು.



Join Whatsapp