ಉಕ್ರೇನ್ ಯುದ್ಧ ಕೊನೆಗೊಳಿಸುವ ಟ್ರಂಪ್ ಯೋಜನೆಗಳ ಬಗ್ಗೆ ತಿಳಿದಿಲ್ಲ: ಝೆಲೆನ್ ಸ್ಕಿ

Prasthutha|

ಕೀವ್: ರಷ್ಯಾ–ಉಕ್ರೇನ್ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಂದಿರುವ ಯೋಜನೆಯ ವಿವರಗಳ ಬಗ್ಗೆ ತಿಳಿದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಹೇಳಿದ್ದಾರೆ.

- Advertisement -


ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ‘ಯುರೋಪಿಯನ್ ರಾಜಕೀಯ ಸಮುದಾಯ ಸಮಾವೇಶ’ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಝೆಲೆನ್ ಸ್ಕಿ, ಟ್ರಂಪ್ ಅವರು ಯುದ್ಧವನ್ನು ಸಾಧ್ಯವಾದಷ್ಟು ಬೇಗನೆ ಕೊನೆಗೊಳಿಸುವ ವಿಶ್ವಾಸವಿದೆ. ಆದರೆ, ಅವರು ತಮ್ಮ ಯೋಜನೆ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ.


ಯುದ್ಧ ಕೊನೆಗೊಳಿಸುವ ಪ್ರಕ್ರಿಯೆ ಕೇವಲ ಕ್ಷಿಪ್ರವಾಗಿಯಷ್ಟೇ ಇದ್ದರೆ ಉಕ್ರೇನ್ಗೆ ನಷ್ಟವೂ ಉಂಟಾಗಬಹುದು. ಆದರೆ, ಯಾವ ರೀತಿಯಲ್ಲಿ ಪ್ರಕ್ರಿಯೆ ಸಾಗಲಿದೆ ಎಂಬುದು ಇನ್ನೂ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.
ರಷ್ಯಾ ಒಂದು ತಿಂಗಳಿನಿಂದ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಉತ್ತರ ಕೊರಿಯಾ ಸಹ ತನ್ನ ಪಡೆಗಳನ್ನು ರಷ್ಯಾದ ಕರ್ಸ್ಕ್ ಪ್ರಾಂತ್ಯದಲ್ಲಿ ನಿಯೋಜಿಸಿರುವುದು ಉಕ್ರೇನ್ನ ಆತಂಕವನ್ನು ಹೆಚ್ಚಿಸಿದೆ. ಇಂತಹ ಹೊತ್ತಿನಲ್ಲೇ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

- Advertisement -


ಟ್ರಂಪ್ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ಅಮೆರಿಕವು ಉಕ್ರೇನ್ಗೆ ನೀಡುತ್ತಿರುವ ಭಾರಿ ಶಸ್ತ್ರಾಸ್ತ್ರ ಹಾಗೂ ಹಣಕಾಸಿನ ನೆರವಿನ ಬಗ್ಗೆ ಟೀಕಿಸಿದ್ದರು. ಹಾಗೆಯೇ, ಅಧಿಕಾರಕ್ಕೇರಿದರೆ ಯುದ್ಧವನ್ನು ಸಾಧ್ಯವಾದಷ್ಟು ಬೇಗನೆ ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದರು.



Join Whatsapp