ವಿಚಾರಣೆ ಅಂತ್ಯ: ಶಿಳ್ಳೆ ಹೊಡೆಯುತ್ತಾ ಲೋಕಾ ಕಚೇರಿಯಿಂದ ಹೊರಬಂದ ಸಿಎಂ ಸಿದ್ದರಾಮಯ್ಯ

Prasthutha|

ಮೈಸೂರು: ಮುಡಾ ಕೇಸ್ ನಲ್ಲಿ ತನಿಖೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ ಬುಲಾವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.

- Advertisement -

ಲೋಕಾಯುಕ್ತ ಎಸ್.ಪಿ. ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, ಸಿಎಂ ಆಗಮನ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತ ಕಚೇರಿ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಚಾರಣೆ ಎದುರುಸಿ ಶಿಳ್ಳೆ ಹೊಡೆಯುತ್ತಾ ಲೋಕಾ ಕಚೇರಿಯಿಂದ ಹೊರಬಂದ ಸಿಎಂ, ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.

- Advertisement -


ಸಿಎಂಗೆ ಲೋಕಾಯುಕ್ತ ಎಸ್ಪಿ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ. ಭೂ ಸ್ವಾಧೀನ, ಪರಿಹಾರ, ಡಿನೋಟಿಪಿಕೇಷನ್ ಹೇಗಾಯ್ತು? ಭೂ ಪರಿವರ್ತನೆ ವೇಳೆ ಸಿಎಂ ಆಗಿ ನಿಮ್ಮ ಪಾತ್ರ ಏನೇನಿತ್ತು? 50:50 ನಿಯಮದಡಿ ಸೈಟು ಹಂಚಿಕೆಗೆ ನೀವೇ ಶಿಫಾರಸ್ಸು ಮಾಡಿದ್ರಾ? ಸಿಎಂ ಆಗಿ ನೀವು ಯಾಱರಿಗೆ ಶಿಫಾರಸು ಪತ್ರಗಳನ್ನ ಕೊಟ್ಟಿದ್ರಿ? ಬೇರೆಡೆ ಬದಲಿ ನಿವೇಶನ ನೀಡಲು ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳುನ್ನ ಲೋಕಾ ಪೊಲೀಸರು ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಸಿಎಂ ಸಿದ್ದರಾಮಯ್ಯಗೆ ತನಿಖೆ ವೇಳೆ ದೂರುದಾರರು ಆರೋಪದಂತೆ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.



Join Whatsapp