ಟ್ರಂಪ್ ಗೆ ಆರಂಭಿಕ ಮುನ್ನಡೆ ದೊರೆಯುತ್ತಿದ್ದಂತೆ ಕಮಲಾ ಅವರು ತಮ್ಮ ಭಾಷಣವನ್ನು ರದ್ದುಪಡಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಲ್ಮಾ ಮಥರ್ನಲ್ಲಿ ಕಮಲಾ ಭಾಷಣ ನಿಗದಿಯಾಗಿತ್ತು.
ಇತ್ತ ಡೊನಾಲ್ಡ್ ಟ್ರಂಪ್ ಅವರು ತಮ್ಮ ಬೆಂಬಲಿಗರನ್ನುದ್ದೇಶಿಸಿ ಫ್ಲೋರಿಡಾದಲ್ಲಿ ಮಾತನಾಡಲು ಸಜ್ಜಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಅವರು 247–210 ಅಂತರದ ಮುನ್ನಡೆಯಲ್ಲಿದ್ದಾರೆ. ಸರ್ಕಾರ ರಚನೆಗೆ 270 ಸ್ಥಾನಗಳು ಬೇಕು.
ಟ್ರಂಪ್ಗೆ ಆರಂಭಿಕ ಮುನ್ನಡೆ ದೊರೆಯುತ್ತಿದ್ದಂತೆ ‘ಗೇಮ್, ಸೆಟ್ ಅಂಡ್ ಮ್ಯಾಚ್’ ಎಂದು ಟ್ವೀಟ್ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್, ಇದೀಗ, ‘ಅಮೆರಿಕವು ನಿರ್ಮಾಣ ಮಾಡುವವರಿಂದ ಕೂಡಿದ ರಾಷ್ಟ್ರ. ಶೀಘ್ರದಲ್ಲೇ, ನೀವು ನಿರ್ಮಾಣದಲ್ಲಿ ತೊಡಗಿಕೊಳ್ಳಲು ಮುಕ್ತರಾಗುತ್ತೀರಿ’ ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.