ಮಥುರಾ: ವೃಂದಾವನದ ಬಂಕೆ ಬಿಹಾರಿ ದೇವಾಲಯದಲ್ಲಿ ಆನೆಯ ಮೂರ್ತಿಯಿಂದ ಸೋರಿಕೆಯಾಗುತ್ತಿದ್ದ ಎಸಿ ನೀರನ್ನೇ ಚರಣ್ ಅಮೃತ ಅಂದರೆ ಕೃಷ್ಣನ ಪಾದದ ಪವಿತ್ರ ನೀರು ಎಂದು ತಪ್ಪಾಗಿ ಭಾವಿಸಿ ಸರತಿ ಸಾಲಿನಲ್ಲಿ ಬಂದು ಅದೇ ನೀರನ್ನು ಕುಡಿದಿದ್ದಾರೆ.
ಈ ದೃಶ್ಯವನ್ನು ಕಂಡು ʼಜನರಿಗೆ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆʼ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿರುವ ಪ್ರಸಿದ್ಧ ಬಂಕೆ ಬಿಹಾರಿ ದೇವಾಲಯದಲ್ಲಿ ನಡೆದಿದ್ದು, ಈ ದೇವಾಲಯದ ಗೋಡೆಯಲ್ಲಿರುವ ಆನೆಯ ಮೂರ್ತಿಯ ಶಿಲ್ಪದಿಂದ ನಿಗೂಢವಾಗಿ ಸೋರಿಕೆಯಾಗುತ್ತಿದ್ದ ನೀರನ್ನು ಚರಣ್ ಅಮೃತ ಅಂದರೆ ಶ್ರೀ ಕೃಷ್ಣನ ಪಾದದ ಪವಿತ್ರ ನೀರು ಎಂದು ತಪ್ಪಾಗಿ ಭಾವಿಸಿ ಭಕ್ತರು ಅದನ್ನು ಕುಡಿದಿದ್ದಾರೆ. ಇನ್ನೂ ಹಲವು ಭಕ್ತರು ಆ ನೀರನ್ನು ತಲೆಗೆ ಚಿಮುಕಿಸಿದ್ದಾರೆ. ವಾಸ್ತವಾಗಿ ಅದು ಎಸಿಯಿಂದ ಸೋರಿಕೆಯಾದ ನೀರಾಗಿದ್ದು, ಭಕ್ತರು ತಪ್ಪಾಗಿ ಭಾವಿಸಿ ಆ ನೀರನ್ನೇ ಪವಿತ್ರ ಜಲವೆಂದು ಕುಡಿದಿದ್ದಾರೆ.
ಈ ಕುರಿತ ವಿಡಿಯೋವನ್ನು BroominsKaBaap ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಗಂಭೀರ ಶಿಕ್ಷಣದ ಅವಶ್ಯಕತೆಯಿದೆ; ದೇವರ ಪಾದದ ಚರಣಾಮೃತ ಎಂದು ಭಾವಿಸಿ ಎಸಿ ನೀರನ್ನು ಕುಡಿದ ಜನರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.