ಮೂಸಂಬಿ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

Prasthutha|

ಮೂಸಂಬಿಯನ್ನು ಮೆಡಿಟರೇನಿಯನ್ ಸಿಹಿ ನಿಂಬೆ, ಸಿಹಿ ಲಿಮೆಟ್ಟಾ ಎಂದು ಕರೆಯಲಾಗುತ್ತದೆ.

- Advertisement -

ಈ ಹಣ್ಣಿನ ರೂಪವು ನಿಂಬೆಹಣ್ಣನ್ನು ಹೋಲುತ್ತದೆಯಾದರೂ ಸ್ವಲ್ಪ ಹುಳಿ ಜತೆಗೆ ಸಿಹಿಯ ರುಚಿಯನ್ನು ಹೊಂದಿದೆ. ಮೂಸಂಬಿಯು ರಿಫ್ರೆಶ್ ರುಚಿ ಅಥವಾ ಸುವಾಸನೆ ಹೊರತಾಗಿ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಮೂಸಂಬಿ ಜ್ಯೂಸ್ ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸುತ್ತದೆ. ಇದರಲ್ಲಿ ಜೀವಸತ್ವಗಳು, ಖನಿಜಾಂಶ, ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಹಾಗಾದ್ರೆ ಮೂಸಂಬಿ ಜ್ಯೂಸ್ ಅನ್ನು ಪ್ರತಿದಿನ ಕುಡಿದ್ರೆ ಆಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.

- Advertisement -


ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಮೂಸಂಬಿಯಲ್ಲಿ ವಿಟಮಿನ್ ಸಿ ಹಾಗೂ ನಾರಿನಂಶ ಹೇರಳವಾಗಿದ್ದು ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ.


ಉತ್ತಮ ಜೀರ್ಣಕ್ರಿಯೆ
ಮೂಸಂಬಿ ಜ್ಯೂಸ್ ಜೀರ್ಣಕಾರಿ ರಸ ಮತ್ತು ಪಿತ್ತರಸದ ಉತ್ಫಾದನೆಯನ್ನು ಉತ್ತೇಜಿಸಲು ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಆಮ್ಲವನ್ನು ತಟಸ್ಥಗೊಳಿಸಲು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.


ಒತ್ತಡ ಮತ್ತು ಆತಂಕದಲ್ಲಿ ಪರಿಣಾಮಕಾರಿ
ಮೂಸಂಬಿ ರಸವು ಮನಸ್ಸು ಮತ್ತು ದೇಹವನ್ನು ತಂಪಾಗಿಸುತ್ತದೆ. ಒತ್ತಡ ಮತ್ತು ಆತಂಕದಂತಹ ಮಾನಸಿಕ ಒತ್ತಡದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.


ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ಮೂಸಂಬಿಯಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.


ಮೂತ್ರಪಿಂಡದ ಕಲ್ಲು
ಮೂತ್ರದಲ್ಲಿ ಕಲ್ಲು ರೂಪಿಸುವ ಖನಿಜಾಂಶವನ್ನು ಬಂಧಿಸುವ ಮೂಲಕ ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.


ಮೂಸಂಬಿ ಜ್ಯೂಸ್ ನಲ್ಲಿ ಕಡಿಮೆ ಕ್ಯಾಲೋರಿ, ಕಡಿಮೆ ಕೊಬ್ಬು ಮತ್ತು ಫೈಬರ್ ಸಮೃದ್ಧವಾಗಿದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ


ಚರ್ಮದ ಆರೋಗ್ಯ
ಚರ್ಮವನ್ನು ಒಳಿಗಿನಿಂದ ಪೋಷಿಸುವುದರ ಜತೆಗೆ ತೇವಾಂಸವನ್ನು ನೀಡುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತಾ ಚರ್ಮವು ಹೊಳೆಯುವಂತೆ ಮಾಡುತ್ತದೆ.



Join Whatsapp