ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ನಿಲ್ಲಿಸಲು ಅದಾನಿ ಸಂಸ್ಥೆ ನಿರ್ಧಾರ

Prasthutha|

ನವದೆಹಲಿ: ಬಾಂಗ್ಲಾದೇಶದಿಂದ ತನಗೆ ಬರಬೇಕಿರುವ ವಿದ್ಯುತ್ ಬಿಲ್ ಇನ್ನೂ ಸಾಕಷ್ಟು ಬಾಕಿ ಇರುವ ಹಿನ್ನೆಲೆಯಲ್ಲಿ ಅದಾನಿ ಸಂಸ್ಥೆ ವಿದ್ಯುತ್ ಸರಬರಾಜು ನಿಲ್ಲಿಸಲು ನಿರ್ಧರಿಸಿದೆ.

- Advertisement -


ಅದಾನಿ ಗ್ರೂಪ್ ಗೆ ಸೇರಿದ ಎಪಿಜೆಎಲ್ ಸಂಸ್ಥೆ ಹಾಗೂ ಬಾಂಗ್ಲಾದೇಶ ಸರ್ಕಾರದ ಮಧ್ಯೆ ವಿದ್ಯುತ್ ಸರಬರಾಜಿಗೆ ಒಪ್ಪಂದವಾಗಿದೆ. ಆದರೆ, 846 ಮಿಲಿಯನ್ ಡಾಲರ್ ನಷ್ಟು ಹಣ ಬಾಕಿ ಉಳಿಸಿಕೊಂಡಿದೆ ಎಂದು ಅದಾನಿ ಪವರ್ ಸಂಸ್ಥೆ ಹೇಳುತ್ತಿದೆ. ಅದು ಪಾವತಿ ಆಗುವವರೆಗೂ ಬಾಂಗ್ಲಾದೇಶಕ್ಕೆ ಪವರ್ ಸಪ್ಲೈ ನಿಲ್ಲಿಸುವುದಾಗಿ ಎಪಿಜೆಎಲ್ ಎಚ್ಚರಿಕೆ ನೀಡಿದೆ. ಈಗಾಗಲೇ ವಿದ್ಯುತ್ ಸರಬರಾಜು ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎನ್ನಲಾಗುತ್ತಿದೆ.


ಕಳೆದ ಗುರುವಾರ ರಾತ್ರಿ ಬಾಂಗ್ಲಾದೇಶಕ್ಕೆ 1,600 ಮೆಗಾವ್ಯಾಟ್ ಗೂ ಹೆಚ್ಚು ಮೊತ್ತದ ವಿದ್ಯುತ್ ಕೊರತೆ ಎದುರಾಗಿತ್ತು ಎಂಬುದು ಬಾಂಗ್ಲಾದೇಶದ ಪವರ್ ಗ್ರಿಡ್ ದತ್ತಾಂಶದಿಂದ ತಿಳಿದುಬಂದಿದೆ. ಅದೇ ವೇಳೆ ಜಾರ್ಖಂಡ್ ನಲ್ಲಿ ಇರುವ ಅದಾನಿ ಪವರ್ ನ 1,496 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕದಲ್ಲಿ 700 ಮೆಗಾವ್ಯಾಟ್ ಮಾತ್ರವೇ ವಿದ್ಯುತ್ ಉತ್ಪಾದನೆ ಆಗುತ್ತಿದೆ.



Join Whatsapp