ಮಧ್ಯಪ್ರದೇಶ: ಸಂರಕ್ಷಿತಾರಣ್ಯದಲ್ಲಿ 10 ಕಾಡಾನೆಗಳ ಅನುಮಾನಾಸ್ಪದ ಸಾವು

Prasthutha|

- Advertisement -

ಮಧ್ಯಪ್ರದೇಶದ ಭೋಪಾಲ್​ನಲ್ಲಿರುವ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಲ್ಲಿ 10 ಕಾಡಾನೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ.

ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭಾನುವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಕ್ಷೇತ್ರ ನಿರ್ದೇಶಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -

ಬೆಳೆಗಳ ಮೇಲೆ ಸಿಂಪಡಿಸಿರುವ ಕೀಟನಾಶಕಗಳ ಮೇಲೆ ಅನುಮಾನ ಮೂಡಿತ್ತು, ಆದರೆ ಪ್ರಾಥಮಿಕ ಸಂಶೋಧನೆಗಳು ಬೆಳೆಗಳಿಗೆ ಕೀಟನಾಶಕ ಬಳಕೆಗೆ ಯಾವುದೇ ಪುರಾವೆಗಳನ್ನು ತೋರಿಸಿಲ್ಲ. 2-3 ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿಯನ್ನು ಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರದಂದು ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಬಳಿ ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುವ ಎಕ್ಸ್‌ಗ್ರೇಷಿಯಾ ಪರಿಹಾರವನ್ನು ಹೆಚ್ಚಿಸಲಾಗಿದೆ. ಆನೆ ದಾಳಿಗೆ ಬಲಿಯಾದವರ ಪರಿಹಾರವನ್ನು 8 ಲಕ್ಷದಿಂದ 25 ಲಕ್ಷಕ್ಕೆ ಏರಿಸಲಾಗಿದೆ ಎಂದು ಮುಖ್ಯಮಂತ್ರಿ ಯಾದವ್ ಹೇಳಿದ್ದಾರೆ.



Join Whatsapp